ನ್ಯೂಸ್

ಬಂಗಾಳ ಹಿಂಸಾಚಾರ: ಸಿಬಿಐ ತನಿಖೆ ಆದೇಶಿಸಿದ ಹೈಕೋರ್ಟ್​

ಕೊಲ್ಕತ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳ ನಂತರ ನಡೆದ ಹಿಂಸಾಚಾರಗಳ ಬಗ್ಗೆ ಸಿಬಿಐ ತನಿಖೆಗೆ ಕೊಲ್ಕತ ಹೈಕೋರ್ಟ್​ ಆದೇಶಿಸಿದೆ. ಕೊಲ್ಕತ ಪೊಲೀಸ್​ ಕಮಿಷನರ್​ ಸೌಮೇನ್ ಮಿತ್ರ ಅವರೂ ಸೇರಿದಂತೆ ಈ ತನಿಖೆಗಾಗಿ ಸಿಬಿಐ ವಿಶೇಷ ತಂಡವೊಂದನ್ನು ರಚಿಸಬೇಕೆಂದು ನ್ಯಾಯಾಲಯ ಹೇಳಿದೆ.

ಆರೋಪಿತ ಹಿಂಸಾಚಾರದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕೆಂದು ಕೋರಿರುವ ಸರಣಿ ರಿಟ್​ ಅರ್ಜಿಗಳ ವಿಚಾರಣೆಯ ನಂತರ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂಡಾಲ್​ ಅವರ ನೇತೃತ್ವದ ಪಂಚಸದಸ್ಯ ನ್ಯಾಯಪೀಠವು ಇಂದು ಈ ಆದೇಶ ಹೊರಡಿಸಿದೆ.

ಚುನಾವಣೆಯಲ್ಲಿ ಟಿಎಂಸಿಯ ಭಾರೀ ಗೆಲುವಿನ ನಂತರ ಬಿಜೆಪಿಯ ಮಹಿಳಾ ಸದಸ್ಯರ ಮೇಲೆ ಹಲ್ಲೆ ನಡೆಸಿದರು, ಕಾರ್ಯಕರ್ತರನ್ನು ಸಾಯಿಸಿದರು, ಬಿಜೆಪಿ ಸದಸ್ಯರ ಮನೆಗಳನ್ನು ಧ್ವಂಸ ಮಾಡಿ, ಅಂಗಡಿ-ಕಚೇರಿಗಳನ್ನು ಲೂಟಿ ಮಾಡಿದರು ಎಂದು ಬಿಜೆಪಿ ಆರೋಪಿಸಿತ್ತು. ಹೈಕೋರ್ಟ್​ ಆದೇಶದ ಪ್ರಕಾರ ಆರಂಭಿಕ ತನಿಖೆ ನಡೆಸಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರಾಜ್ಯ ಸರ್ಕಾರ ಹಿಂಸಾಚಾರದ ಘಟನೆಗಳ ಬಗ್ಗೆ ಭವ್ಯನಿರ್ಲಕ್ಷ್ಯ ತೋರಿದ್ದು, ಸಿಬಿಐ ತನಿಖೆ ನಡೆಸಿ ರಾಜ್ಯದ ಹೊರಗೆ ಪ್ರಕರಣಗಳ ವಿಚಾರಣೆ ನಡೆಸಬೇಕೆಂದು ಶಿಫಾರಸು ಮಾಡಿತ್ತು. (ಏಜೆನ್ಸೀಸ್)