ನವದೆಹಲಿ: ಮಾ.1ರಿಂದ ಅನ್ವಯವಾಗುವಂತೆ ಕೇಬಲ್ ದರವನ್ನು ಇಳಿಕೆ ಮಾಡುವ ಮೂಲಕ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಗ್ರಾಹಕರಿಗೆ ಬಂಪರ್ ಕೊಡುಗೆ ಪ್ರಕಟಿಸಿದೆ. ಕೇಬಲ್, ಪ್ರಸಾರ ಸೇವೆಗಳ ಚೌಕಟ್ಟಿನಲ್ಲಿ ಟ್ರಾಯ್ ತಿದ್ದುಪಡಿ ತಂದಿರುವುದರಿಂದ ಇನ್ಮುಂದೆ ಎಲ್ಲ ಉಚಿತ ಚಾನಲ್ಗಳಿಗೆ ಗ್ರಾಹಕರು ಪಾವತಿಸಬೇಕಿದ್ದ ಮಾಸಿಕ ನೆೆಟ್ವರ್ಕ್ ಸಾಮರ್ಥ್ಯ ಶುಲ್ಕ (ಎನ್ಸಿಎಫ್) 130 ರೂ.ಗೆ ನಿಗದಿಯಾಗಲಿದೆ.
ಇದರ ಜತೆಗೆ ಓರ್ವ ಗ್ರಾಹಕನ ಹೆಸರಿನಲ್ಲಿ ಒಂದೇ ಮನೆಯಲ್ಲಿ ಹಲವು ಟಿವಿ ಕನೆಕ್ಷನ್ಗಳು ಇದ್ದರೆ ಹೆಚ್ಚುವರಿ ಟಿವಿಗಳಿಗೆ ವಿಧಿಸುತ್ತಿದ್ದ ಎನ್ಸಿಎಫ್ ಶುಲ್ಕವನ್ನು ಗರಿಷ್ಠ ಶೇ.40ಕ್ಕೆ ನಿಗದಿಪಡಿಸಲು ಟ್ರಾಯ್ ನಿರ್ಧರಿಸಿದೆ. ಕೇಬಲ್ ಆಪರೇಟರ್ಗಳು ಹಾಗೂ ನೆಟ್ವರ್ಕ್ ಸಂಸ್ಥೆಗಳು ಗ್ರಾಹಕರಿಂದ ಗರಿಷ್ಠ 160 ರೂ. ಮಾತ್ರ ಎನ್ಸಿಎಫ್ ಶುಲ್ಕ ಪಡೆಯಬೇಕು, ಈ ಮೊತ್ತಕ್ಕೆ ಕನಿಷ್ಠ 200 ಉಚಿತ ಚಾನಲ್ ನೀಡಬೇಕು ಎಂದು ತಿಳಿಸಲಾಗಿದೆ.