ನ್ಯೂಸ್

ಸಚಿವ ಸಂಪುಟ ವಿಸ್ತರಣೆ; 15 ನಿಮಿಷಗಳಲ್ಲಿ ಎರಡು ಬಾರಿ ಪ್ರಮಾಣವಚನ ಸ್ವೀಕರಿಸಿದ ಸಚಿವ.. ಕಾರಣವೇನು ಗೊತ್ತಾ?

ಭೋಪಾಲ್​​: ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಅಧಿಕಾರ ವಹಿಸಿಕೊಂಡ ಸುಮಾರು ಏಳು ತಿಂಗಳ ನಂತರ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಂಪುಟ ಸಚಿವರಾಗಿ ರಾಮನಿವಾಸ್​​​ ರಾವತ್​​ ಅವರು ಪ್ರಮಾಣ ವಚನ ಸ್ವೀಕರಿಸಿದರು. ಅದು ಒಂದಲ್ಲಾ ಎರಡು ಬಾಕಿ ಪ್ರಮಾಣವಚನ ಸ್ವೀಕರಿಸಿದರು. ಪದಗ್ರಹಣದ ವೇಳೆ ಅವರು ಮಾಡಿದ ಯಡವಟ್ಟು ಇದಕ್ಕೆಲ್ಲಾ ಕಾರಣವಾಗಿದೆ.

ರಾಮನಿವಾಸ್​​​​ ರಾವತ್​​ ಅವರು ತಮ್ಮ ಪ್ರಮಾಣ ಪತ್ರದಲ್ಲಿ ರಾಜ್ಯಕ್ಕೆ ಮಂತ್ರಿ ಬದಲಿಗೆ ರಾಜ್ಯಮಂತ್ರಿ (ರಾಜ್ಯ ಸಚಿವರು) ಎಂದು ತಪ್ಪಾಗಿ ಓದಿದ್ದರಿಂದ ಎರಡು ಬಾರಿ ಪ್ರಮಾಣವಚನ ಸ್ವೀಕರಿಸಬೇಕಾಯಿತು. ರಾಜ್ಯಮಂತ್ರಿ ಎಂದು ಅವರು ಅಧಿಕಾರ ಸ್ವೀಕರಿಸಿದ ಬಳಿಕ ಅಧಿಕಾರಿಯೊಬ್ಬರು ಇದರರ್ಥ ಕ್ಯಾಬಿನೆಟ್​​​ ಮಂತ್ರಿ ಎಂದು ತಿಳಿಸಿದರು. ಅವರು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೋ ಅಥವಾ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೋ ಎಂಬ ಗೊಂದಲ ಎಲ್ಲರಲ್ಲೂ ಮೂಡಿತು. ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿದಾಗ ರಾವತ್ ಅವರು ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಲಾಯಿತು ಎಂದು ಅವರು ಹೇಳಿದರು.

ಆರಂಭಿಕ ಕಾರ್ಯಕ್ರಮ ರಾಜಭವನದ ಸಾಂದೀಪನಿ ಸಭಾಂಗಣದಲ್ಲಿ ನಡೆಯಿತು. ನಂತರ ಅದೇ ಕಾರ್ಯಕ್ರಮವು ರಾಜ್ಯಪಾಲರ ಭವನದ ದರ್ಬಾರ್ ಹಾಲ್‌ನಲ್ಲಿ ನಡೆಯಿತು. ಸಿಎಂ ಯಾದವ್ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ದರ್ಬಾರ್ ಹಾಲ್‌ನಲ್ಲಿ ರಾಜ್ಯಪಾಲ ಮಂಗುಭಾಯ್ ಪಟೇಲ್ ಅವರು ರಾವತ್ ಅವರಿಗೆ ಮತ್ತೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ರಾವತ್ ನಂತರ ರಾಜ್ಯಕ್ಕೆ ಮಂತ್ರಿ ಎಂದು ಪ್ರಮಾಣ ವಚನ ಸ್ವೀಕರಿಸಿದರು ಎಂದು ಅಧಿಕಾರಿ ಹೇಳಿದರು.

ಶಿಯೋಪುರ ಜಿಲ್ಲೆಯ ವಿಜಯಪುರದಿಂದ ಆರು ಬಾರಿ ಶಾಸಕರಾಗಿರುವ ರಾವತ್ ಅವರು ಏಪ್ರಿಲ್ 30ರಂದು ಲೋಕಸಭೆ ಪ್ರಚಾರದ ವೇಳೆ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡರು. ರಾವತ್ ಬಿಜೆಪಿ ಸೇರಿದರೂ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ಇನ್ನೂ ರಾಜ್ಯ ವಿಧಾನಸಭೆಗೆ ರಾಜೀನಾಮೆ ನೀಡಿಲ್ಲ. (ಏಜೆನ್ಸೀಸ್​​)