ನ್ಯೂಸ್

ಕ್ಯಾಬ್​ ಚಾಲಕನಿಗೆ ಧಮ್ಕಿ: ಹೇಳಿದ ಜಾಗದಲ್ಲಿ ಬಿಡದಿದ್ದರೆ ಪ್ರಯಾಣ ದರ ನೀಡುವುದಿಲ್ಲ? ಅಸಲಿಗೆ ಅಲ್ಲಿ ನಡೆದಿದ್ದೇ ಬೇರೆ! | Cab Driver

Cab Driver: ಇಂದಿನ ದಿನಗಳಲ್ಲಿ ಕ್ಯಾಬ್​ ಚಾಲಕರು ಹಾಗೂ ಪ್ರಯಾಣಿಕರ ನಡುವಿನ ಜಗಳಗಳು ನಡೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಬಾರಿ ಹೆಚ್ಚು ಶುಲ್ಕದ ಬಗ್ಗೆಯಾಗಲಿ ಅಥವಾ ಚಾಲಕ ಪ್ರಯಾಣಿಕರನ್ನು ಕರೆದುಕೊಂಡು ತಡವಾಗಿ ಬಂದ ಬಗ್ಗೆಯಾಗಲಿ ಅಲ್ಲ. ಅದರ ಬದಲಿಗೆ ಸವಾರಿಯಲ್ಲಿ ಸೇರಿಸಿದ ಸ್ಥಳದ ಬದಲು ಬೇರೆ ಸ್ಥಳಕ್ಕೆ ಬಿಡಲು ಒತ್ತಾಯಿಸಿದ ಮಹಿಳಾ ಪ್ರಯಾಣಿಕರ ಬಗ್ಗೆ. ಚಾಲಕನು ಆಕೆಯನ್ನು ಬೇರೆ ಸ್ಥಳದಲ್ಲಿ ಬಿಡಲು ನಿರಾಕರಿಸುತ್ತಿರುವುದರಿಂದ ಪ್ರಯಾಣದ ವೆಚ್ಚವನ್ನು ಪಾವತಿಸುವುದಿಲ್ಲ ಎಂಬ ಬೆದರಿಕೆ ಹಾಕುತ್ತಿರುವ ವಿಡಿಯೋ ಸಧ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಘಟನೆ ಏನು?

ಚಾಲಕನು ತನ್ನ ಮೊಬೈಲ್​ನಲ್ಲಿ ಸೆರೆಹಿಡಿದ ವಿಡಿಯೋದಲ್ಲಿ ಮಹಿಳಾ ಪ್ರಯಾಣಿಕಳು ಮುಖ್ಯ ರಸ್ತೆಯಲ್ಲಿ ಬಿಡುವ ಬದಲು ಬೇರೆ ಸ್ಥಳಕ್ಕೆ ಬಿಡುವಂತೆ ಒತ್ತಾಯಿಸುತ್ತಿರುವುದನ್ನು ಕೇಳಬಹುದು. ಆದರೆ ಚಾಲಕನು ಆಕೆ ಹೇಳುತ್ತಿರುವ ಸ್ಥಳಕ್ಕೆ ಆಕೆಯನ್ನು ಬಿಡಲು ನಿರಾಕರಿಸಿದ್ದಾನೆ. ಇದಕ್ಕೆ ಕೋಪಗೊಂಡ ಮಹಿಳೆಯು ಪ್ರಯಾಣ ದರ ನೀಡುವುದಿಲ್ಲ ಎಂದು ಬೆದರಿಕೆ ಹಾಕುತ್ತಾಳೆ. ಅದಕ್ಕೆ ಪ್ರತಿಕ್ರಿಯಿಸಿದ ಚಾಲಕನು ನೀವು ಹಣ ಪಾವತಿಸದೆ ಇದ್ದರೆ, ಈಗಲೇ ಹೊರಟು ಬಿಡಿ, ಆದರೆ, ನೀವು ಸೂಚಿಸಿದ ಸ್ಥಳವನ್ನು ಬಿಟ್ಟು ಬೇರೆ ಕಡೆ ಬಿಡುವುದಿಲ್ಲ ಎಂದು ಉತ್ತರಿಸಿದ್ದಾನೆ.

ಇದಲ್ಲದೆ, ನೀವು ಪ್ರಯಾಣ ಶುಲ್ಕ ಪಾವತಿಸಿದರೆ, ನಾನು ಶ್ರೀಮಂತನಾಗುವುದಿಲ್ಲ ದಯವಿಟ್ಟು ನನ್ನ ಕ್ಯಾಬ್​ನಿಂದ ಇಳಿಯಿರಿ ಎಂದು ತಿಳಸಿದ್ದಾನೆ. ಇದಾ ನಂತರ, ಮಹಿಳೆಯು ಚಾಲಕನನ್ನು ಅಗೌರವಿಸಿ ಕ್ಯಾಬ್​ನಿಂದ ಹೊರಬಂದಿರುವುದನ್ನು ಈ ವಿಡಿಯೋ ತೋರಿಸುತ್ತದೆ.

ನೆಟಿಜನ್​ ಪ್ರತಿಕ್ರಿಯೆ ಏನು?

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ನೆಟಿಜನ್​ಗಳು ಚಾಲಕ ಹೇಳಿದ್ದು ಸರಿಯಾಗಿದೆ. ತಾವು ಸೂಚಿಸಿದ ಮಾರ್ಗವನ್ನು ಬಿಟ್ಟು ಬೇರೆಡೆ ಕೇಳುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ, ಕೆಲವು ಬಳಕೆದಾರರು ಮಹಿಳಾ ಚಾಲಕನಿಗೆ ಸುರಕ್ಷತಾ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ, ಅವರು ಒಬ್ಬಂಟಿಯಾಗಿ ಹೋಗುವ ಬಗ್ಗೆ ಚಿಂತಿತರಾಗಿದ್ದರೆ. (ಏಜೆನ್ಸೀಸ್​)