ಬೆಂಗಳೂರು: ಯುವ ಸಬಲೀಕರಣ, ಆರೋಗ್ಯ ,ಕೃಷಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಕ ಸಿ.ಎ.ಫಿಲಿಪೋಸ್ ಅವರಿಗೆ ಏಷಿಯಾ ಟುಡೇ ಸಂಸ್ಥೆಯು ‘ಸಮಾಜ ಸೇವೆ ಸಾಧನೆ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್ ಶೆಟ್ಟರ್ ಹಾಗೂ ಹೃದ್ರೋಗ ತಜ್ಞ, ಸಂಸದ ಡಾ.ಸಿ.ಎನ್ ಮಂಜುನಾಥ್, ನಟ ಗುಲ್‌ಷನ್ ಗ್ರೋವರ್ ಪ್ರಶಸ್ತಿಯನ್ನು ವಿತರಿಸಿ ಗೌರವಿಸಿದರು.
ಫಿಲಿಪೋಸ್ ಅವರು ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು, ಯುವಜನತೆಗೆ ಉದ್ಯೋಗ ಕೊಡಿಸುವುದು, ಸಾಮಾಜಿಕ ಪಿಡುಗಾಗಿರುವ ಡ್ರಗ್ಸ್ ಮತ್ತು ಮಾದಕ ವಸ್ತುಗಳ ನಿರ್ಮೂಲನೆ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ ಎಂದು ಏಷಿಯಾ ಟುಡೆ ತಿಳಿಸಿದೆ.
ಸಮಾಜ ಸೇವೆಯಲ್ಲಿನ ಅವರ ಈ ಸಾಧನೆಗಳ ಹೆಜ್ಜೆ ಗುರುತುಗಳು ಅನುಕರಣೀಯ. ಅವರ ಈ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.