ಶಿವಮೊಗ್ಗದಲ್ಲಿ ಸುಗಮ ಸಂಗೀತ ಪರಿಷತ್‌ನಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕವಿ ಬಿ.ಆರ್.ಲಕ್ಷ್ಮಣ ರಾವ್ ಅವರನ್ನು ಸನ್ಮಾನಿಸಲಾಯಿತು. ಶಾಂತಾ ಶೆಟ್ಟಿ, ಎಂ.ಎನ್.ಸುಂದರರಾಜ್, ಉಮಾ ದಿಲೀಪ್, ಲಲಿತಮ್ಮ, ಮಥುರಾ ನಾಗರಾಜ್ ಮುಂತಾದವರಿದ್ದರು.  
ನ್ಯೂಸ್

ಪುಸ್ತಕ ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಿ

ಶಿವಮೊಗ್ಗ: ಕವಿತೆಗಳ ಮೂಲಕ ಕವಿ ಸದಾ ಜೀವಂತವಾಗಿರುತ್ತಾನೆ. ಕವಿಯ, ಸಾಹಿತಿಗಳ ಪುಸ್ತಕಗಳನ್ನು ಕೊಂಡು ಓದಿದರೆ ಅದರಿಂದ ಒಬ್ಬ ಲೇಖಕರನ್ನು ಮನೆಗೆ ಕರೆದೊಯ್ದ ಹಾಗಾಗುತ್ತದೆ. ಹೀಗಾಗಿ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕವಿ ಬಿ.ಆರ್.ಲಕ್ಷ್ಮಣ್ ರಾವ್ ಹೇಳಿದರು.

ನಗರದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಮತ್ತಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾವಗೀತೆಗಳು ಸಂಗೀತದ ಅರಮನೆಯ ಹೆಬ್ಬಾಗಿಲು. ಶಿವಮೊಗ್ಗದ ಅಳಿಯನಾದ ನನಗೆ ಈ ಊರಿನೊಡನೆ ಐವತ್ತು ವರ್ಷಗಳ ನಂಟಿದೆ. ನನ್ನ ಮಕ್ಕಳು ಇಲ್ಲಿಯೇ ಓದಿದ್ದಾರೆ. ನನಗೆ ಇಲ್ಲಿ ತುಂಬ ಗೆಳೆಯರಿದ್ದಾರೆ. ಹೀಗಾಗಿ ಶಿವಮೊಗ್ಗ ನನಗೆ ಅತ್ಯಂತ ಪ್ರಿಯವಾದ ಸ್ಥಳ ಎಂದರು.

ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಶಾಂತಾ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸದಸ್ಯರು ಸಂವಾದದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಅಕಾಡೆಮಿ ಸದಸ್ಯರು ಲಕ್ಷ್ಮಣ ರಾವ್ ಅವರ ಗೀತೆಗಳನ್ನು ಹಾಡಿದರು.

ಬಿ.ಆರ್.ಲಕ್ಷ್ಮಣ ರಾವ್ ಅವರನ್ನು ಸನ್ಮಾನಿಸಲಾಯಿತು. ನಾದಲೀಲೆ, ಅರ್ಪಿತಾ, ನಾದಶ್ರೀ, ತರಂಗಿಣಿ, ಚಿರಂತನ ಸಂಗೀತ ಸಂಸ್ಥೆಯವರು ಕವಿಗಳಿಗೆ ಗೌರವ ಸಲ್ಲಿಸಿದರು. ಜಿ.ವಿಜಯಕುಮಾರ್, ಎಂ.ಎನ್.ಸುಂದರರಾಜ್, ಶೋಭಾ ಸತೀಶ್, ಉಮಾ ದಿಲೀಪ್, ಜಯಶ್ರೀ ಶ್ರೀಧರ್, ಲತಾ ಕೆದಿಲಾಯ, ಲಲಿತಮ್ಮ, ಹೇಮಾ, ಮಂಜುನಾಥ್, ಮಥುರಾ ನಾಗರಾಜ್, ಸುಶೀಲಾ ಷಣ್ಮುಗಂ, ಧನಪಾಲ್ ಸಿಂಗ್ ಮುಂತಾದವರಿದ್ದರು.