ಕೋಲಾರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಒಕ್ಕಲಿಗ ಜಿಲ್ಲಾಧ್ಯಕ್ಷ ಸಿಎಂಆರ್​ ಶ್ರೀನಾಥ್​ ಮಾತನಾಡಿದರು. ನಾರಾಯಣಸ್ವಾಮಿ, ಶಿವಕುಮಾರ್​ ಇದ್ದರು. 
ನ್ಯೂಸ್

ಉದ್ಯಮಿ ಒಕ್ಕಲಿಗ ಸಮಾವೇಶ

ಕೋಲಾರ: ಉದ್ಯಮಿ ಒಕ್ಕಲಿಗ 2ನೇ ಸಮಾವೇಶವನ್ನು ಜೂ.21ಮತ್ತು 22ರಂದು ನಗರ ಹೊರವಲಯದ ನಂದಿನಿ ಪ್ಯಾಲೇಸ್​ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉದ್ಯಮ ಒಕ್ಕಲಿಗ ಜಿಲ್ಲಾಧ್ಯಕ್ಷ ಸಿಎಂಆರ್​ ಶ್ರೀನಾಥ್​ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮುದಾಯದಲ್ಲಿನ ನಿರುದ್ಯೋಗಿಗಳನ್ನು ಸ್ವಯಂ ಉದ್ಯೋಗಸ್ಥರನ್ನಾಗಿ ಮಾಡಲು ಉದ್ಯಮಿ ಒಕ್ಕಲಿಗ ಸಂಟನೆ ಕಟ್ಟಿಕೊಂಡು ಬರಲಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಸಾಕಷ್ಟು ಮಂದಿಗೆ ಉದ್ಯಮಿಯಾಗುವ ಆಸೆ ಇರುತ್ತದೆ. ಆದರೆ ಸೂಕ್ತ ಸಲಹೆ, ತರಬೇತಿ ಇಲ್ಲದ ಕಾರಣ ಹಾಗೇ ಉಳಿದುಕೊಂಡಿದ್ದಾರೆ. ಅಂತಹವರಿಗಾಗಿ ವಿಚಾರಗೋಷ್ಠಿ ಆಯೋಜಿಸಲಾಗಿದ್ದು, ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ವೃತ್ತ ಅಧ್ಯಕ್ಷ ಪ್ರತಾಪ್​ರೆಡ್ಡಿ, ನಿವೃತ್ತ ಡಿವೈಎಸ್ಪಿ ಶಿವಕುಮಾರ್​, ನಾಗೇರಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ ಇದ್ದರು.

ಕಾರ್ಯಕ್ರಮಗಳ ವಿವರ

ಜೂ.21ರಂದು ಬೆಳಗ್ಗೆ 10ಕ್ಕೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಚಿವ ಡಾ.ಎಂ.ಸಿ.ಸುಧಾಕರ್​ ಉದ್ಘಾಟಿಸಲಿದ್ದು, ಮಾಜಿ ಸಂಸದ ಬಿ.ಎನ್​.ಬಚ್ಚೇಗೌಡ, ಪದ್ಮಶ್ರೀ ಪುರಸತ ಪ್ರಶಾಂತ್​ ಪ್ರಕಾಶ್​, ಎ್​ಕೆಸಿಸಿ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ, ಶಾಸಕರಾದ ಬಿ.ಎನ್​.ರವಿಕುಮಾರ್​, ಪುಟ್ಟಸ್ವಾಮಿಗೌಡ, ಕೆ.ವೈ.ನಂಜೇಗೌಡ, ಎಂಎಲ್ಸಿ ಗೋವಿಂದರಾಜು ಸೇರಿ ಇತರರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30ರ ನಂತರ ಮಹಿಳಾ ಉದ್ಯಮಿಗಳ ಸಭೆ, ಮಧ್ಯಾಹ್ನ 2ಕ್ಕೆ ವ್ಯವಹಾರ ಪ್ರಸ್ತಾವನೆಗಳು ಮತ್ತು ಪ್ರಸ್ತುತಿಗಳು ಮತ್ತು ರಿಯಾಲ್ಟಿ ಮತ್ತು ಕೋಳಿ ಸಾಕಣೆ ಕುರಿತು ಚರ್ಚೆ ನಡೆಯಲಿದೆ ಎಂದು ಸಿಎಂಆರ್​ ಶ್ರೀನಾಥ್​ ತಿಳಿಸಿದರು.

ಸಮಾರೋಪ

ಜೂ.22ರಂದು ಬೆಳಗ್ಗೆ 9ಕ್ಕೆ ಕೋಲಾರ ಹಾಗೂ ಬೆಳಗ್ಗೆ 10ಕ್ಕೆ ವೃತ್ತ ಸದಸ್ಯರ ವ್ಯವಹಾರ ಚರ್ಚೆಗಳು ನಡೆಯಲಿದೆ. ಬೆಳಗ್ಗೆ 11ಕ್ಕೆ ವ್ಯವಹಾರ ಪ್ರಸ್ತಾವನೆಗಳು ಮತ್ತು ಪ್ರಸ್ತುತಿಗಳು ಕೃಷಿ, ಇತರ ವಲಯಗಳ ಕುರಿತು ವಿಚಾರ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಸಮಾವೇಶದ ಸಮಾರೋಪ ನಡೆಯಲಿದ್ದು, ಸ್ಫಟಿಕಪುರಿ ಮಹಾಸಂಸ್ಥಾನದ ಮಠದ ಡಾ. ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಆದಿಚುಂನಗಿರಿ ಮಹಾಸಂಸ್ಥಾನ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಚಿವ ಕೃಷ್ಣಬೇಗೇರೌಡ, ಸಂಸದ ಡಾ.ಕೆ.ಸುಧಾಕರ್​, ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಕೊಸಕೋಟೆ ಶಾಸಕ ಶರತ್​ ಬಚ್ಚೇಗೌಡ, ಎಂಎಲ್ಸಿ ಎಂ.ಎಲ್​.ಅನಿಲ್​ಕುಮಾರ್​ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.