ನ್ಯೂಸ್

ಮನೆ ನಿರ್ಮಿಸಿದ ಗುತ್ತಿಗೆದಾರನಿಗೆ 1 ಕೋಟಿ ರೂ. ಮೌಲ್ಯದ ವಾಚ್ ಉಡುಗೊರೆ ನೀಡಿದ ಮನೆ ಮಾಲೀಕ! Rolex Watch

ಪಂಜಾಬ್‌: ( Rolex Watch ) ಖ್ಯಾತ ಉದ್ಯಮಿಯೊಬ್ಬರು ತಮ್ಮ ಕನಸಿನ ಮನೆಯನ್ನು ಅದ್ಭುತವಾಗಿ ನಿರ್ಮಿಸಿದ ಗುತ್ತಿಗೆದಾರನಿಗೆ ಅಮೂಲ್ಯವಾದ ಉಡುಗೊರೆಯನ್ನು ನೀಡಿದ್ದಾರೆ. ಈ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸುದ್ದಿಯಾಗಿದೆ.

ಉದ್ಯಮಿ ಗುರುದೀಪ್ ದೇವ್ ಬಾತ್, ಕಟ್ಟಡ ಗುತ್ತಿಗೆದಾರ ರಾಜಿಂದರ್ ಸಿಂಗ್ ರೂಪಾ ಅವರ ಉತ್ತಮ ಗುಣಮಟ್ಟದ ಕೆಲಸ ಮತ್ತು ಸಮರ್ಪಣಾ ಮನೋಭಾವದಿಂದ ಸಮಯಕ್ಕೆ ಸರಿಯಾಗಿ ಯೋಜನೆಯನ್ನು ಮುಗಿಸುವುದರ ಜತೆ ಪ್ರಾಮಾಣಿಕತೆಗೆ ಅಮೂಲ್ಯವಾದ ಉಡುಗೊರೆಯನ್ನು ನೀಡಲು ನಿರ್ಧರಿಸಿದರು. ಕಟ್ಟಡ ಗುತ್ತಿಗೆದಾರ ರಾಜಿಂದರ್ ಸಿಂಗ್ ಅವರು ರೂಪಾ ಅವರಿಗೆ 18 ಕ್ಯಾರೆಟ್ ಚಿನ್ನದ 1 ಕೋಟಿ ರೂ. ಮೌಲ್ಯದ ರೋಲೆಕ್ಸ್ ವಾಚ್ ಉಡುಗೊರೆಯಾಗಿ ನೀಡಿದ್ದಾರೆ.

ಪಂಜಾಬ್‌ನ ಜಿರಾಕ್‌ಪುರದ ಬಳಿ ಇರುವ ಈ ಯೋಜನೆಯನ್ನು ಆಧುನಿಕ ಸ್ಪರ್ಶಗಳೊಂದಿಗೆ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಪಂಜಾಬ್‌ನ ಶಾಕೋಟ್‌ನ ರಾಜಿಂದರ್ ಸಿಂಗ್ ರೂಪಾ ಎಂಬ ಗುತ್ತಿಗೆದಾರರಿಗೆ ಕೇವಲ 2 ವರ್ಷಗಳಲ್ಲಿ ಇದನ್ನು ನಿರ್ಮಿಸುವ ಜವಾಬ್ದಾರಿಯನ್ನು ವಹಿಸಲಾಯಿತು. ಒಪ್ಪಿದ ವೇಳಾಪಟ್ಟಿಯಲ್ಲಿ ಅದನ್ನು ಪೂರ್ಣಗೊಳಿಸಲು ರೂಪಾ 200 ಕಾರ್ಮಿಕರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಎಲ್ಲಾ ಆಧುನಿಕ ಸೌಕರ್ಯಗಳೊಂದಿಗೆ 9 ಎಕರೆ ಜಾಗದಲ್ಲಿ ಎಸ್ಟೇಟ್ ನಿರ್ಮಿಸಲಾಗಿದೆ. ರಾಜಿಂದರ್ ಸಿಂಗ್ ರೂಪಾ ನಿರ್ಮಿಸಿದ ಎಸ್ಟೇಟ್ ವಿಶಾಲವಾದ ಸಭಾಂಗಣಗಳು, ಭೂದೃಶ್ಯದ ಉದ್ಯಾನಗಳು ಮತ್ತು ಶೈಲಿ ಮತ್ತು ಪ್ರಾಯೋಗಿಕತೆಯನ್ನು ಸಂಯೋಜಿಸುವ ವಿಶಿಷ್ಟ ರಚನೆಗಳನ್ನು ಹೊಂದಿದೆ.

ಐಷಾರಾಮಿ ಮನೆಯ ವಿನ್ಯಾಸ:

ಕಟ್ಟಡದ ಮಾಲೀಕ ಗುರುದೀಪ್ ಮಾತನಾಡಿ,  ಮನೆ ಕೆಲಸವನ್ನು ಪೂರ್ಣಗೊಳಿಸುವಲ್ಲಿ ರಾಜಿಂದರ್ ಸಿಂಗ್ ರೂಪಾ ಅವರ ಕಾರ್ಯ ಪದಗಳಿಗೆ ಮೀರಿದೆ. ಅವನು ನನ್ನ ಮನೆಯನ್ನು ನಾನು ಕೇಳಿದ್ದಕ್ಕಿಂತ ಅದ್ಭುತವಾಗಿ ನಿರ್ಮಿಸಿದನು. ಹಾಗಾಗಿಯೇ ರೂಪಾ ಅವರ ಬದ್ಧತೆಗೆ ಧನ್ಯವಾದ ಎಂದು ಗುತ್ತಿಗೆದಾರರು ರೋಲೆಕ್ಸ್ ವಾಚ್ ನೀಡಿದ್ದೇನೆ ಎಂದರು.

ಗುತ್ತಿಗೆದಾರರಾದ ರಾಜಿಂದರ್ ಸಿಂಗ್ ರೂಪಾ ಮಾತನಾಡಿ, 'ಇಷ್ಟು ದೊಡ್ಡ ಯೋಜನೆಯಲ್ಲಿ ಕೆಲಸ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಸುಂದರ ಕಲ್ಪನೆಗೆ ಜೀವ ತುಂಬುವಲ್ಲಿ ಶ್ರಮಶಕ್ತಿ, ಸಹಕಾರದಿಂದಾಗಿ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದರು.