ನ್ಯೂಸ್

ಮುಂಬೈನ ಫ್ಲಾಟ್​ವೊಂದಕ್ಕೆ ನುಗ್ಗಿದ ಆ ಭಯಾನಕ ಕಳ್ಳ ಮಾಡಿದ್ದೇನು ಗೊತ್ತ?; ಇವನೊಂಥರ ಕಳ್ಳ!

ಮುಂಬೈ: ಇವನೊಂಥರ ಕಳ್ಳ. ಮುಂಬೈನ ಫ್ಲಾಟ್​ವೊಂದಕ್ಕೆ ನುಗ್ಗಿದ ಈತ ಅಲ್ಲಿರುವ ಯಾವ ಬೆಲೆ ಬಾಳುವ ಸಾಮಾನುಗಳನ್ನು ಮುಟ್ಟಲಿಲ್ಲ!

ಮರಿನೇ ಡ್ರೈವ್​ ಪ್ರದೇಶದ ಒಂದು ಫ್ಲಾಟ್​ಗೆ ನುಗ್ಗಿದ ಕಳ್ಳ, ಮೊದಲು ಹೋಗಿದ್ದು ಫ್ರಿಜ್​ ಹತ್ತಿರ. ಅದರೊಳಗಿದ್ದ ಎರಡು ಶಾಂಪೇನ್​ ಬಾಟಲ್​ ತೆಗೆದುಕೊಂಡು ಬಂದು ಪಕ್ಕದಲ್ಲೇ ಕುಳಿತು ಕುಡಿಯಲು ಆರಂಭಿಸಿದ್ದಾನೆ. ಆದರೆ ಏನನ್ನೂ ದೋಚಿಲ್ಲ.

ಮನೆಯ ಮಾಲೀಕ ಇತ್ತೀಚೆಗಷ್ಟೇ ಆ ಮನೆಗೆ ಬಂದಿದ್ದ. ಆದ್ದರಿಂದ ಮನೆಯಲ್ಲಿ ತುಂಬ ವಸ್ತುಗಳೇನು ಇರಲಿಲ್ಲ. ಮಾಲೀಕ ಅದೇ ಬಿಲ್ಡಿಂಗ್​ನ ಇನ್ನೊಂದು ಮಹಡಿಯಲ್ಲಿದ್ದ. ಬೆಳಗ್ಗೆ ಎದ್ದು ಬಂದು ಬಾಗಿಲು ತೆಗೆಯಲು ನೋಡಿದ್ದಾನೆ. ಆದರೆ ಬಾಗಿಲು ತೆರೆಯಲಿಲ್ಲ, ಅದು ಒಳಗಿನಿಂದ ಲಾಕ್​ ಆಗಿತ್ತು.

ಆಗ ಮಾಲೀಕ ಬೀಗ ಒಡೆಯುವವರನ್ನು ಕರೆಸಿ ಬಾಗಿಲು ತೆಗೆದು ಒಳ ಹೋಗಿ ನೋಡಿದ್ದಾನೆ. ಕಳ್ಳ ಆರಾಮಾಗಿ ಎಣ್ಣೆ ಹೊಡೆಯುತ್ತಿದ್ದಾನೆ. ತಕ್ಷಣ ಅವನನ್ನು ಹಿಡಿದು ಪೊಲೀಸರಿಗೆ ಕರೆ ಮಾಡಿದ್ದಾನೆ ಮಾಲೀಕ. ಇವರು ಬರುವುದನ್ನು ನೋಡಿಯೂ ಕಳ್ಳ ಓಡಿ ಹೋಗಲು ಯತ್ನಿಸಿಲ್ಲ. ಅಥವಾ ಅದು ಅವನಿಂದ ಆಗಿಲ್ಲ.

ನಂತರ ಬಂದ ಪೊಲೀಸರು ಎಣ್ಣೆ ಕಳ್ಳನನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಅಲ್ಲಿ ಏನು ಬಾಯ್ಬಿಟ್ಟ ಎಂಬುದಿನ್ನು ತಿಳಿದು ಬಂದಿಲ್ಲ. (ಏಜೆನ್ಸೀಸ್​)