ನ್ಯೂಸ್

ಟ್ರಯೋ ವರ್ಲ್ಡ್‌ ಅಕಾಡೆಮಿಯ ನವೀನ್ ಕೆ.ಎಂ ಅವರಿಗೆ ಬ್ಯುಸಿನೆಸ್ ವರ್ಲ್ಡ್‌ ಪ್ರಶಸ್ತಿ; ಬ್ಯುಸಿನೆಸ್‌ ವರ್ಲ್ಡ್‌ 40 ಅಂಡರ್ ಪ್ರಶಸ್ತಿ ಪಡೆದ ಏಕೈಕ ಕನ್ನಡಿಗ

ನವದೆಹಲಿ: ಶಿಕ್ಷಣ ಕ್ಷೇತ್ರಕ್ಕಾಗಿ ನೀಡಿದ ಕೊಡುಗೆ ಹಿನ್ನೆಲೆಯಲ್ಲಿ ಬೆಂಗಳೂರಿನ ಟ್ರಯೋ ವರ್ಲ್ಡ್‌ ಅಕಾಡೆಮಿಯ ಮ್ಯಾನೇಜಿಂಗ್ ಡೈರೆಕ್ಟರ್ ನವೀನ್ ಕೆ.ಎಂ ಅವ್ರು ಪ್ರತಿಷ್ಠಿತ ಬ್ಯುಸಿನೆಸ್‌ ವರ್ಲ್ಡ್‌ ಎಜುಕೇಶನ್‌ 40 ಅಂಡರ್‌ 40 ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ನವೀನ್ ಕೆ.ಎಂ ಅವರಿಗೆ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಂತಹ ಕೊಡುಗೆ, ಸಿಕ್ಕ ಗೌರವಗಳು, ಎದುರಿಸಿದ ಸವಾಲುಗಳ ಮೌಲ್ಯಾಂಕನ ಮಾಡಿ ನೀಡುವ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಇದು. ವಿವಿಧ ಹಂತಗಳಲ್ಲಿ ಸಂದರ್ಶನವನ್ನೂ ಕೂಡ ನಡೆಸಲಾಗಿತ್ತು. ಅದರಲ್ಲೂ ಪ್ರಮುಖವಾಗಿ 40 ವರ್ಷದೊಳಗಿನ ಸಾಧಕರಿಗೆ ಈ ಪ್ರಶಸ್ತಿಯನ್ನ ನೀಡಲಾಗುತ್ತೆ. ಈ ಬಾರಿ ಪ್ರಶಸ್ತಿಗೆ ಆಯ್ಕೆಯಾಗಿರೋ ಏಕೈಕ ಕನ್ನಡಿಗ ಟ್ರಯೋ ವರ್ಲ್ಡ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾಗಿರೋ ನವೀನ್ ಕೆ.ಎಂ ಅವರು. ಬಿಡಬ್ಲ್ಯು & ಎಕ್ಸ್‌ಚೇಂಜ್ ಫಾರ್ ಮೀಡಿಯಾದ ಚೇರ್ಮನ್ ಮತ್ತು ಎಡಿಟರ್‌ ಇನ್ ಚೀಫ್ ಅನುರಾಗ್‌ ಭಾತ್ರಾ, NAAC ಮತ್ತು NETF ಚೇರ್ಮನ್‌ ಆಗಿರೋ ಅನೀಲ್ ಸಹಸ್ರಬುಧೇ ಸೇರಿದಂತೆ ಹಲವು ಗಣ್ಯರು ಈ ಪ್ರಶಸ್ತಿ ಪ್ರದಾನ ಮಾಡಿದ್ರು.

ನವೀನ್‌ ಕೆ. ಎಂ ಅವ್ರು ಉದ್ಯಮಿ ಹಾಗೂ ಶಿಕ್ಷಣ ತಜ್ಞ. ನವೀನ್ ಕೆ.ಎಂ ಅವರ ಸಾರಥ್ಯದಲ್ಲಿ ನಡೆಯುತ್ತಿರೋ ಟ್ರಯೋ ವರ್ಲ್ಡ್ ಆಕಾಡೆಮಿ, ಪ್ರತಿಷ್ಠಿತ ಐಬಿ ವರ್ಲ್ಡ್‌ ಸ್ಕೂಲ್‌ನಿಂದ ಗುರುತಿಸಲ್ಪಟ್ಟಿರೋ ಶಾಲೆ. ಜೊತೆೆಗೆ ಇನ್‌ಸ್ಟಿಟ್ಯೂಶನ್ ಆಫ್ ಹ್ಯಾಪಿನೆಸ್‌ ಅನ್ನೋ ವಿಶೇಷ ಪ್ರಶಸ್ತಿ ಪಡೆದಿದೆ. ಟ್ರಯೋ ವರ್ಲ್ಡ್ ಅಕಾಡೆಮಿಯಲ್ಲಿ ಐಬಿ ಮತ್ತು ICSE ಶಿಕ್ಷಣದ ಶಾಲೆಗಳಿದ್ದು. ಐಬಿ ಸಿಲೆಬಸ್ ಶಾಲೆಯಲ್ಲಿ 22ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಟ್ರಯೋ ವರ್ಲ್ಡ್ ಅಕಾಡೆಮಿ ಜೊತೆ ಜೊತೆಗೆ ನವೀನ್‌ .ಕೆ ಎಂ ಅವರು ಯುಪಿಎಸ್‌ಸಿ, ಕೆಪಿಎಸ್‌ಸಿ ತರಬೇತಿ ನೀಡ್ತಿರೋ ಇಂಡಿಯಾ ಫಾರ್ ಐಎಎಸ್‌ನ ಫೌಂಡರ್‌ ಡೈರೆಕ್ಟರ್‌ ಕೂಡ ಆಗಿದ್ದಾರೆ. ಅತ್ಯಂತ ಕಿರಿಯ ವಯಸ್ಸಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆ ನವೀನ್ ಕೆ.ಎಂ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಒಲಿದು ಬಂದಿದೆ.