ಕುಂದಾಪುರ ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯವಹಾರ ಯೋಜನೆ ಪ್ರಸ್ತುತಿ ಕಾರ್ಯಕ್ರಮ ನಡೆಯಿತು. 
ನ್ಯೂಸ್

ವ್ಯವಹಾರ ಯೋಜನೆ ಪ್ರಸ್ತುತಿ ಕಾರ್ಯಕ್ರಮ

ಇಂದಿರಾ ಎನ್ ಕೆ
ಕುಂದಾಪುರ: ಕುಂದಾಪುರ ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ವಹಣಾಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ‘ವ್ಯವಹಾರ ಯೋಜನೆ ಪ್ರಸ್ತುತಿ’ ಕಾರ್ಯಕ್ರಮ ಕಾಲೇಜಿನ ನಿರ್ವಹಣಾಶಾಶ್ತ್ರ ವಿಭಾಗದಲ್ಲಿ ನಡೆಯಿತು.
ಪ್ರಾಂಶುಪಾಲ ರಾಮರಾಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಅನುಭವ ಮೂಡಿಸಲೆಂದು ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಏಳು ವಿಧದ ವ್ಯವಹಾರದ ಯೋಜನೆಯನ್ನು ವಿವರಿಸಿದರು.
ಉಡುಪಿ ಅಜ್ಜರಕಾಡು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ದಿವ್ಯಾ ಎಂ.ಎಸ್., ಕೋಟಪಡುಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಾಮಚಂದ್ರ ಭಟ್, ಕಾಲೇಜು ಉಪನ್ಯಾಸಕರಾದ ಗಣೇಶ್ ಪೈ. ಎಂ., ಡಾ. ಶೇಖರ ಬಿ., ಡಾ. ಉದಯ ಶೆಟ್ಟಿ ಕೆ., ಡಾ.ಭಾಗೀರಥಿ ನಾಯ್ಕ, ಕುವಾರ ದೊಡ್ಡಮನಿ ಹಾಗೂ ಅಮಿತಾ ಉಪಸ್ಥಿತರಿದ್ದರು. ನಿರ್ವಹಣಾಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಚೇತನಾ ಎಂ. ಕಾರ್ಯಕ್ರಮ ಸಂಯೋಜಿಸಿದರು.