ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಟ್ಟದಪುರದಲ್ಲಿ ಭರ್ಜರಿ ವ್ಯಾಪಾರ ನಡೆಯಿತು. 
ನ್ಯೂಸ್

ಬೆಟ್ಟದಪುರದಲ್ಲಿ ಹಬ್ಬಕ್ಕೆ ವ್ಯಾಪಾರ ಜೋರು

ಬೆಟ್ಟದಪುರ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಟ್ಟದಪುರದಲ್ಲಿ ಗುರುವಾರ ಹೂವು, ಹಣ್ಣುಗಳ ಜತೆ ಮಣ್ಣಿನಿಂದ ಮಾಡಿದ ದೀಪಗಳು ಮತ್ತು ಪಟಾಕಿಗಳ ಮಾರಾಟ ಭರ್ಜರಿಯಾಗಿ ನಡೆಯಿತು.

ಗೊರಹಳ್ಳಿ, ಚಪ್ಪರದಹಳ್ಳಿ, ಅಂಬಲಾರೆ, ಹಾರನಹಳ್ಳಿ, ಚಿಕ್ಕನೇರಳೆ, ಹಸುವಿನಕಾವಲು, ಈಚೂರು, ಬಾರಸೆ, ಬೆಟ್ಟದತುಂಗ, ಅತ್ತಿಗೋಡು, ಸಂಗರಶೆಟ್ಟಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ಜನರು ಆಗಮಿಸಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರು. ದೀಪಾವಳಿ ಹಾಗೂ ಲಕ್ಷ್ಮೀ ಪೂಜೆ ಹಿನ್ನೆಲೆಯಲ್ಲಿ ಹೂಗಳಿಗೆ ಹೆಚ್ಚು ಬೇಡಿಕೆ ಇತ್ತು. ಒಂದು ಕೆ.ಜಿ. ಚೆಂಡು ಹೂ 100 ರಿಂದ 120 ರೂ. ದರಕ್ಕೆ ಮಾರಾಟವಾಯಿತು. ಪೂಜೆಗಾಗಿ ವಿವಿಧ ಹೂಗಳು ಹಾಗೂ ಮಣ್ಣಿನಿಂದ ಮಾಡಿದ ದೀಪಗಳಿಗೆ ಹೆಚ್ಚಿನ ಬೇಡಿಕೆ ಇದ್ದುದ್ದರಿಂದ ಸರಾಸರಿ ಬೆಲೆಯಲ್ಲಿ ಮಾರಾಟವಾಯಿತು.