ನ್ಯೂಸ್

ರಾಜ್ಯದ ಜನತೆಗೆ ಬಸ್​ ದರ ಏರಿಕೆಯ ಶಾಕ್​ ನೀಡಿದ ಸರ್ಕಾರ: ಶೇ. 12 ಟಿಕೆಟ್​ ದರ ಏರಿಕೆ

ಬೆಂಗಳೂರು: ರಾಜ್ಯ ಸರ್ಕಾರವು ರಾಜ್ಯದ ಜನರಿಗೆ ಬಸ್​ ದರ ಏರಿಕೆಯ ಶಾಕ್​ ನೀಡಿದ್ದು, ಮಂಗಳವಾರ ಶೇ. 12ರಷ್ಟು ಟಿಕೆಟ್​ ದರವನ್ನು ಏರಿಸಿದೆ.

ಒಟ್ಟು 3 ಸಾರಿಗೆ ನಿಯಮಗಳಿಗೆ ಈ ಆದೇಶ ಅನ್ವಯವಾಗಲಿದೆ. ಬಿಎಂಟಿಸಿ ಹೊರತುಪಡಿಸಿ ಕೆಎಸ್​ಆರ್​​ಟಿಸಿ,​ ವಾಯವ್ಯ ಹಾಗೂ ಈಶಾನ್ಯ ಸಾರಿಗೆಯ ಟಿಕೆಟ್​ ಪ್ರಯಾಣ ದರ ಏರಿಕೆ ಮಾಡಲಾಗಿದೆ.

ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಅನ್ವಯವಾಗಲಿದೆ. ಕಳೆದ ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬಸ್​ ದರ ಏರಿಕೆ ಮಾಡಲಾಗಿದ್ದು, ಪ್ರಯಾಣಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. (ದಿಗ್ವಿಜಯ ನ್ಯೂಸ್​)