ನ್ಯೂಸ್

ಪಾದಯಾತ್ರೆ ಹೊರಟಿದ್ದವರ ಮೇಲೆ ಹರಿದ ಬಸ್​​: ಸ್ಥಳದಲ್ಲಿಯೇ ಮೂವರು ಸಾವು! | Accident

ಕೊಪ್ಪಳ: ಪಾದಯಾತ್ರೆ ಹೊರಟಿದ್ದವರ ಮೇಲೆ ಖಾಸಗಿ ಸ್ಲೀಪರ್ ಕೋಚ್ ಬಸ್ ಹರಿದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿರುವ(Accident) ಘಟನೆ ಕೊಪ್ಪಳದ ಕೂಕನಪಳ್ಳಿ ಗ್ರಾಮದ ರಾ.ಹೆ. 50 ರಲ್ಲಿ ಮಂಗಳವಾರ ಬೆಳ್ಳಗೆ ನಡೆದಿದೆ.

ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ನಿವಾಸಿಗಳಾದ ಅನ್ನಪೂರ್ಣ(40),ಪ್ರಕಾಶ್(25), ಶರಣಪ್ಪ(19) ಮೃತರು. ಕೊಪ್ಪಳ‌ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೇಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದ ವೇಳೆ ಘಟನೆ ಸಂಭವಿದೆ.

ಘಟನೆಯಲ್ಲಿ ನಾಲ್ಕು ಜನರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುನಿರಾಬಾದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.