ನ್ಯೂಸ್

ಭೂಕುಸಿತದ ಭಯಾನಕ ವಿಡಿಯೋ: ಬಸ್​​ನಲ್ಲಿದ್ದ ಪ್ರಯಾಣಿಕರು ಬಚಾವಾಗಿದ್ದೆ ರೋಚಕ

ಉತ್ತರಾಖಂಡ್: ನೈನಿತಾಲ್‌ನ ರಸ್ತೆ ಮೇಲೆ ಭಾರಿ ಪ್ರಮಾಣದಲ್ಲಿ ಭೂಕುಸಿತವಾಗಿದ್ದು, 14 ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್‌ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಸ್ತೆಯಲ್ಲಿ ಸಾಗುತ್ತಿದ್ದ ಬಸ್ಸಿನ ಮುಂದೆಯೇ ಬೃಹತ್‌ ಗಾತ್ರದ ಗುಡ್ಡ ಕುಸಿದಿದೆ. ನಂತರ ಕ್ಷಣಾರ್ಧದಲ್ಲಿ ಗುಡ್ಡದ ಮೇಲಿಂದ ಮಣ್ಣು ಕುಸಿಯಲು ಪ್ರಾರಂಭಿಸಿದೆ. ಈ ವೇಳೆ ಪ್ರಾಣ ಉಳಿಸಿಕೊಳ್ಳುವ ಧಾವಂತದಲ್ಲಿ ಬಸ್​​ನಲ್ಲಿದ್ದ ಪ್ರಯಾಣಿಕರು​​​ ಕಿಟಕಿ-ಬಾಗಿಲಿನ ಮೂಲಕ ಬಸ್​​ನಿಂದ ಹೊರ ಜಿಗಿದಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಚಾಲಕ ಬಸ್‌ ಅನ್ನು ಹಿಂದಕ್ಕೆ ತೆಗೆದುಕೊಂಡು ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.