ಕಾಲೇಜ್ಕುಮಾರ ಮತ್ತು ಬಿಚ್ಚುಗತ್ತಿ ಸಿನಿಮಾ ಖ್ಯಾತಿಯ ನಿರ್ದೇಶಕ ಹರಿ ಸಂತೋಷ್ ಸದ್ಯ ಬಂಪರ್ ಸಿನಿಮಾ ಮೂಡ್ನಲ್ಲಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದ ಚಿತ್ರತಂಡ, ಇನ್ನೇನು ಮತ್ತೆ ಕ್ಯಾಮರಾ ಆನ್ ಮಾಡಲು ತಯಾರಿ ನಡೆಸಿದೆ. ಅದಕ್ಕೂ ಮುನ್ನ ಟೀಸರ್ ಬಿಡುಗಡೆ ಮಾಡಿಕೊಳ್ಳಲಿದೆ ಬಂಪರ್ ಚಿತ್ರ.
ಇದನ್ನೂ ಓದಿ: ಕಷ್ಟವಾದ್ರೆ ಮುಂಬೈಗೆ ಬರಬೇಡಿ … ಕಂಗನಾಗೆ ಹೀಗೊಂದು ಸಲಹೆ
ಹೌದು, ಧನ್ವೀರ್ ಗೌಡ ನಾಯಕನಾಗಿ ನಟಿಸುತ್ತಿರುವ ಈ ಚಿತ್ರ ಈಗಾಗಲೇ ಪೋಸ್ಟರ್ ಮೂಲಕವೇ ಸದ್ದು ಮಾಡುತ್ತಿದೆ. ಮಾಸ್ ಲುಕ್ನಲ್ಲಿಯೇ ಧನ್ವೀರ್ ಪೋಸ್ ಕೊಟ್ಟಿದ್ದಾರೆ. ಇದೀಗ ಅದನ್ನು ದೃಶ್ಯಾವಳಿಗಳ ರೂಪದಲ್ಲಿ ತೋರಿಸಲು ನಿರ್ದೇಶಕರು ಪ್ಲಾನ್ ಹಾಕಿದ್ದಾರೆ. ಇನ್ನೇನು ಸೆ. 8ಕ್ಕೆ ಧನ್ವೀರ್ ಜನ್ಮದಿನ. ಆ ಶುಭ ದಿನದ ಪ್ರಯುಕ್ತ ಚಿತ್ರದ ಟೀಸರ್ ಬಿಡುಗಡೆ ಆಗಲಿದೆ.
ಟೀಸರ್ ಚಿತ್ರೀಕರಣಕ್ಕೆಂದೇ ತಮಿಳುನಾಡು ಮತ್ತು ಮೈಸೂರಿನಲ್ಲಿ ಶೂಟಿಂಗ್ ಮುಗಿಸಿಕೊಂಡಿರುವ ನಿರ್ದೇಶಕರು, ಅಕ್ಟೋಬರ್ ಮೊದಲ ವಾರದಿಂದ ಚಿತ್ರೀಕರಣಕ್ಕೆ ತೆರಳಲಿದ್ದಾರಂತೆ. ಬೆಂಗಳೂರು, ಮೈಸೂರು ಸೇರಿ ಹಲವೆಡೆ ಚಿತ್ರೀಕರಣ ಮಾಡಿಕೊಳ್ಳಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿರುವ ಈ ಚಿತ್ರಕ್ಕೆ ಮಫ್ತಿ ಖ್ಯಾತಿಯ ನವೀನ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.