ನ್ಯೂಸ್

ಷೇರುಪೇಟೆಗೆ ಗೂಳಿ ಕಂಬ್ಯಾಕ್​ : ಸೆನ್ಸೆಕ್ಸ್, ನಿಫ್ಟಿ ಅಂಕ ಏರಿಕೆ | Stock Market

ಮುಂಬೈ: ದೇಶೀಯ ಷೇರು (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಆರಂಭಿಕ ದಿನವಾದ ಸೋಮವಾರ(ನ.03) ಏರಿಕೆ ಕಂಡಿವೆ.

ಬಿಎಸ್‌ಇ ಸೆನ್ಸೆಕ್ಸ್ 39.78 ಪಾಯಿಂಟ್‌ಗಳೊಂದಿಗೆ ಶೇ. 0.05 ಏರಿಕೆಯಾಗಿ 83,978.49 ಅಂಕಕ್ಕೆ ಸ್ಥಿರವಾಗಿದೆ. ನಿಫ್ಟಿ50 ಸೂಚ್ಯಂಕವು 41.25 ಪಾಯಿಂಟ್‌ಗಳ ಏರಿಕೆದೊಂದಿಗೆ 25,763.35 ಅಂಕಕ್ಕೆ ಮುಕ್ತಾಯಗೊಂಡಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.6 ರಷ್ಟು ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.7 ರಷ್ಟು ಏರಿಕೆಯಾಗಿ ಪ್ರಮುಖ ಸೂಚ್ಯಂಕಗಳಿಗಿಂತ ಮುಂದಿದೆ.

ನಿಫ್ಟಿ 50 ಸೂಚ್ಯಂಕದಲ್ಲಿ 32 ಷೇರುಗಳು ಏರಿಕೆ ಕಂಡಿದ್ದು, ಅವುಗಳಲ್ಲಿ ಶ್ರೀರಾಮ್ ಫೈನಾನ್ಸ್ (ಶೇ. 6.18 ರಷ್ಟು ಏರಿಕೆ), ಟಾಟಾ ಕನ್ಸ್ಯೂಮರ್ (ಶೇ. 2.62 ರಷ್ಟು ಏರಿಕೆ) ಮತ್ತು ಅಪೊಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ (ಶೇ. 2 ರಷ್ಟು ಏರಿಕೆ) ಅಗ್ರ ಲಾಭ ಗಳಿಸಿವೆ.(ಏಜೆನ್ಸೀಸ್​)