ಮುಂಬೈ: ದೇಶೀಯ ಷೇರು (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಆರಂಭಿಕ ದಿನವಾದ ಸೋಮವಾರ(ಅ.27) ಭಾರೀ ಏರಿಕೆ ಕಂಡಿವೆ.
ಬಿಎಸ್‌ಇ ಸೆನ್ಸೆಕ್ಸ್ 567 ಪಾಯಿಂಟ್‌ಗಳೊಂದಿಗೆ ಶೇ.0.67% ಏರಿಕೆಯಾಗಿ 84,778.84 ಅಂಕಕ್ಕೆ ಸ್ಥಿರವಾಗಿದೆ. ನಿಫ್ಟಿ50 ಸೂಚ್ಯಂಕವು 171 ಪಾಯಿಂಟ್‌ಗಳ ಏರಿಕೆದೊಂದಿಗೆ 25,966.05 ಅಂಕಕ್ಕೆ ಮುಕ್ತಾಯಗೊಂಡಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು 0.7 ಶೇಕಡಾ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು 0.5 ಶೇಕಡಾ ಏರಿಕೆ ಕಂಡಿದೆ.
ಇದನ್ನೂ ಓದಿ:ಆಪರೇಷನ್ ಸಿಂಧೂರದಿಂದ ಭಾರತದ ಖ್ಯಾತಿ ಹೆಚ್ಚಾಗಿದೆ: ನೂತನ ಸ್ವದೇಶಿ ಅಯುಧಗಳು ನಮ್ಮ ಶಕ್ತಿ ಎಂದ Rajnath Singh
ಯುಎಸ್-ಚೀನಾ ವ್ಯಾಪಾರ ಒಪ್ಪಂದದ ಭರವಸೆಗಳು ಮತ್ತು ಅಮೆರಿಕದ ಕೇಂದ್ರ ಬ್ಯಾಂಕ್ ದರ ಕಡಿತ ಘೋಷಣೆಯ ಸಾಧ್ಯತೆಯು ಇಂದಿನ ವಹಿವಾಟಿನಲ್ಲಿ ಷೇರು ಮಾರುಕಟ್ಟೆಯ ಗೂಳಿ ಬಲಪಡಿಸಿತು.ಕಳೆದ ಎಂಟು ವಹಿವಾಟು ಅವಧಿಗಳಲ್ಲಿ ಏಳರಲ್ಲಿ ಸೂಚ್ಯಂಕಗಳು ಈಗ ಏರಿಕೆ ಕಂಡಿವೆ.(ಏಜೆನ್ಸೀಸ್)