ಸಾಂದರ್ಭಿಕ ಚಿತ್ರ 
ನ್ಯೂಸ್

Missing Parrot: ನಮ್ಮನೆ ಗಿಳಿಯನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ!

Missing Parrot: ಮನೆಯಲ್ಲಿ ನಾಯಿಗಳು ಮತ್ತು ಬೆಕ್ಕುಗಳು,  ಮೊಲಗಳು, ಪಾರಿವಾಳಗಳು ಮತ್ತು ಗಿಳಿಗಳನ್ನು  ಸಾಕಿ ತಮ್ಮ ಕುಟುಂಬದ ಸದಸ್ಯರಂತೆ ಪ್ರೀತಿಸುತ್ತಾರೆ. ಅದಕ್ಕಾಗಿ ಆಹಾರದಿಂದ ಆರೋಗ್ಯದವರೆಗೆ ಎಲ್ಲಾ ರೀತಿಯ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ.  ಉತ್ತರ ಪ್ರದೇಶದಲ್ಲಿ   ಒಬ್ಬ ವ್ಯಕ್ತಿಯು ತನ್ನ ಪ್ರೀತಿಯ ರಾಮ ಗಿಳಿಗಾಗಿ  ಕಳೆದುಕೊಂಡಿದ್ದಾನೆ. ಈ ಗಿಳಿಗಾಗಿ ವ್ಯಾಪಕವಾಗಿ ಹುಡುಕುತ್ತಿದ್ದಾನೆ,  ಹುಡುಕಿ ಕೊಟ್ಟವರಿಗಾಗಿ ಲಕ್ಷ ಲಕ್ಷ ಬಹುಮಾನ ಕೊಡುವುದಾಗಿ ಹೇಳಿದ್ದಾರೆ.

ಉತ್ತರ ಪ್ರದೇಶದ ಬುಲಂದ್ ಶಹರ್ ನ ನವೀನ್ ಪಾಠಕ್ ಎಂಬ ವ್ಯಕ್ತಿ ರಾಮ ಗಿಳಿಯನ್ನು ಸಾಕುತ್ತಿದ್ದಾರೆ.  ಡಿಸೆಂಬರ್ 10 ರಿಂದ ರಾಮ ಗಿಳಿ ನಾಪತ್ತೆಯಾಗಿತ್ತು. ನವೀನ್ ಎಲ್ಲಿಗೆ ಹೋದರೂ... ಸಂಜೆಯ ಹೊತ್ತಿಗೆ ಹಿಂತಿರುಗಿ ಬರುತ್ತಾನೆ ಎಂದುಕೊಂಡ. ಆದರೆ ಬರಲಿಲ್ಲ.  ಗಿಳಿ ಕಾಣಿಸದೇ ಇರುವುದರಿಂದ ನವೀನ್ ಪಾಠಕ್ ತೀವ್ರ ಆತಂಕಗೊಂಡಿದ್ದರು.

ಮುದ್ದಿನ ಗಿಳಿ ಬಾರದೇ ಇದ್ದಾಗ ಮನೆಯ ಸುತ್ತಮುತ್ತ ಹಾಗೂ ಇಡೀ ಏರಿಯಾದಲ್ಲಿ ಹುಡುಕಾಟ ಆರಂಭಿಸಿದ್ದರು. ಗಿಳಿ ಇರುವ ಸ್ಥಳವನ್ನು ಸುತ್ತಮುತ್ತಲಿನವರೆಲ್ಲರನ್ನೂ ಕೇಳತೊಡಗಿದರು. ಪ್ರೀತಿಯಿಂದ ‘ವಿಷ್ಣು’ ಎಂದು ಕರೆಯುತ್ತಾರೆ. ಮನೆ  ಮಂದಿಗೆಲ್ಲ ಈ ಗಿಳಿಯನ್ನು ಮನೆ ಮಕ್ಕಳಂತೆ ಪ್ರೀತಿಸಿಯಿಂದ ನೋಡಿ ಕೊಳ್ಳುತ್ತಿದ್ದರು. ಆದರೆ ಈ ಗಿಳಿ ಕಾಣೆಯಾಗಿರುವ ಕುರಿತಾಗಿ ಕುಟುಂಬಸ್ಥರು ದುಖಃ ವ್ಯಕ್ತಪಡಿಸಿದ್ದಾರೆ.

ನವೀನ್ ಪಾಠಕ್ ತಮ್ಮ ಗಿಳಿಯನ್ನು ಪತ್ತೆ ಹಚ್ಚಿದವರಿಗೆ  ಭಾರಿ ಬಹುಮಾನ ಘೋಷಿಸಿದ್ದಾರೆ.  1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದರು. ಈ ಸುದ್ದಿ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.