ನ್ಯೂಸ್

ಕಟ್ಟಡ ಕಾಮಗಾರಿಯಲ್ಲಿ ಕಳಪೆ ಆರೋಪ; ರೈತ ಸಂದಿಂದ ಪ್ರತಿಭಟನೆ

Haveri - Kariyappa Aralikatti

ರಾಣೆಬೆನ್ನೂರ: ತಾಲೂಕಿನ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ 2ನೇ ಮಹಡಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕಳಪೆಯಾಗಿದ್ದು ಕೂಡಲೇ ಈ ಕುರಿತು ತನಿಖೆ ಮಾಡಿಸಬೇಕು. ಜತೆಗೆ ಕಾಮಿರ್ಕರಿಗೆ ವೇತನ ನೀಡದೆ ಮೋಸ ಮಾಡಿರುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ನೇತೃತ್ವ ವಹಿಸಿದ್ದ ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, 2023&-24ನೇ ಸಾಲಿನಲ್ಲಿ ಕೃಷಿ ಮಹಾವಿದ್ಯಾಲಯದ 2ನೇ ಮಹಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಸರ್ಕಾರದಿಂದ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ, ಗುತ್ತಿಗೆದಾರರು ತಮ್ಮ ಬದಲು ಬೇರೆಯವರಿಗೆ ಸಬ್​ ಗುತ್ತಿಗೆ ನೀಡಿ ಕಾಮಗಾರಿ ಮಾಡಿಸಿದ್ದಾರೆ.

ಹೀಗಾಗಿ ಕಟ್ಟಡದ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಆಗಿದೆ. ಅಲ್ಲದೆ ಅನುದಾನ ಬಳಕೆಯಲ್ಲಿ ಭ್ರಷ್ಟಾಚಾರ ನಡೆದಿರುವ ಅನುಮಾನವಿದೆ. ಈ ಕುರಿತು ತನಿಖೆ ಮಾಡಬೇಕು. ಕಟ್ಟಡ ಕಾಮಗಾರಿ ಮಾಡಿರುವ ಕಾಮಿರ್ಕರಿಗೆ ಸರಿಯಾಗಿ ಸಂಬಳ ಸಹ ನೀಡಿಲ್ಲ. ಆದ್ದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ನ್ಯಾಯ ಒದಗಿಸಿಕೊಡಬೇಕು. ಅಲ್ಲಿಯವರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟುಹಿಡಿದರು.

ಸ್ಥಳಕ್ಕೆ ಬಂದ ಆರೋಗ್ಯ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್​ ಅಜೀತ್​ ಮಾತನಾಡಿ, ಕಾಮಗಾರಿಯಲ್ಲಿ ಕಳಪೆಯಾಗಿರುವ ಕುರಿತು ಪರಿಶೀಲಿಸಲಾಗುವುದು. ಕಾಮಿರ್ಕರಿಗೆ ಸಂಬಳ ನೀಡದ ಕುರಿತು ಪರಿಶೀಲಿಸಿ ಕೂಡಲೇ ಅವರಿಗೆ ಸಂಬಳ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗುವುದು.

ಪ್ರಮುಖರಾದ ಸಂಪತ್ತ ಮೇಡ್ಲೇರಿ, ಲೋಹಿತ ಕೆಂಚಮ್ಮನವರ, ಅನೀಲ ರಾಯಚೂರ, ಪ್ರಭುದೇವ ಕದರಮಂಡಲಗಿ, ಸುನೀಲ ಕೊಳ್ಳಿ, ವಿರುಪಾಕ್ಷಯ್ಯ ಜಿ., ಪ್ರಕಾಶ ಕಜ್ಜರಿ, ಮಂಜುನಾಥ ಸೊರಟೂರ, ರಾಜು ಬಿದರಿ, ಲಲಿತಾ ಲಮಾಣಿ, ಲಕ್ಷ$್ಮವ್ವ ಲಮಾಣಿ ಮತ್ತಿತರರು ಪಾಲ್ಗೊಂಡಿದ್ದರು.