ನ್ಯೂಸ್

ಬಜೆಟ್ ಅನುದಾನದಲ್ಲಿ ಈ ತನಕ 51,383 ಕೋಟಿ ರೂ ವೆಚ್ಚ

Bengaluru - Political - Shivananda Tagadur

ಬೆಂಗಳೂರು:
ಕೃಷಿ, ಪಶು ಸಂಗೋಪನೆ, ಸಹಕಾರ, ಇಂಧನ, ಆರೋಗ್ಯ, ತೋಟಗಾರಿಕೆ, ವಸತಿ ಸೇರಿದಂತೆ ನಾನಾ ಇಲಾಖೆಗಳಿಗೆ 2,45,553 ಕೋಟಿ ರೂಗಳನ್ನು ಮೀಸಲಿಡಲಾಗಿದ್ದು, ಅದರಲ್ಲಿ ಈ ತನಕ 51,353 ರೂ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಳೆದ ವರ್ಷ ಈ ಎಲ್ಲಾ ಇಲಾಖೆಗಳಿಗೆ 2,13,387 ಕೋಟಿ ರೂ ಮೀಸಲಿಟ್ಟಿದ್ದು, ಅದರಲ್ಲಿ 2,12,854 ಕೋಟಿ ರೂಗಳನ್ನು ವೆಚ್ಚ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಇಂಧನ ಇಲಾಖೆಗೆ ಅತಿ ಹೆಚ್ಚು ಅನುದಾನ 22,674 ಕೋಟಿ ರೂಗಳನ್ನು ಕಳೆದ ವರ್ಷ ಒದಗಿಸಲಾಗಿತ್ತು. ಆದರೆ ಇನ್ನೂ ಹೆಚ್ಚಿನ ಅಂದರೆ 24,408 ಕೋಟಿ ರೂಗಳನ್ನು ವೆಚ್ಚ ಮಾಡಲಾಗಿತ್ತು. ಈ ವರ್ಷ 23,135 ಕೋಟಿ ರೂ ಅನುದಾನ ನೀಡಿದ್ದು, ಅದರಲ್ಲಿ ಈ ತನಕ 8156 ಕೋಟಿ ರೂ ವೆಚ್ಚ ಮಾಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಳೆದ ವರ್ಷ ಒದಗಿಸಲಾಗಿದ್ದ 23,515 ಕೋಟಿ ರೂ ಅನುದಾನದಲ್ಲಿ 22482 ಕೋಟಿ ರೂ ವೆಚ್ಚ ಮಾಡಲಾಗಿದೆ. ಈ ವರ್ಷ 33806 ಕೋಟಿ ರೂ ಅನುದಾನ ಒದಗಿಸಿದ್ದು, ಈ ತನಕ 6780 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಸಿಎಂ, ಮೇಲ್ಮನೆಯಲ್ಲಿ ತಿಪ್ಪೇಸ್ವಾಮಿ ಅವರು ಕೇಳಿದ ಪ್ರಶ್ನೆಗೆ ವಿವರಣೆ ನೀಡಿದ್ದಾರೆ.
ಭಾರಿ ನೀರಾವರಿಗೆ ಕಳೆದ ವರ್ಷ 16,169 ಕೋಟಿ ಅನುದಾನ ನೀಡಿದ್ದು, ಅದರಲ್ಲಿ 16,079 ಕೋಟಿ ವೆಚ್ಚ ಮಾಡಲಾಗಿತ್ತು. ಈ ವರ್ಷ16,835 ಕೋಟಿ ಮೀಸಲಿರಿಸಿದ್ದು, ಈ ತನಕ 3144 ಕೋಟಿ ವೆಚ್ಚ ಮಾಡಲಾಗಿದೆ ಎಂದಿದ್ದಾರೆ.