ನ್ಯೂಸ್

ಬಿಎಸ್ಸೆನೆಲ್​ ನೌಕರರು ದೇಶದ್ರೋಹಿಗಳು; ಎಲ್ಲರೂ ಮನೆಗೆ ಹೋಗ್ತಾರೆ; ಬಿಜೆಪಿ ಸಂಸದನ ಎಚ್ಚರಿಕೆ...!

ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್​ ಸಂಚಾರ್​ ನಿಗಮದ (ಬಿಎಸ್​ಎನ್​ಎಲ್​) 88 ಸಾವಿರಕ್ಕೂ ಅಧಿಕ ಮನೆಗೆ ಕಳುಹಿಸ್ತಾರೆ; ಕಂಪನಿಯನ್ನು ಖಾಸಗೀಕರಣ ಮಾಡ್ತಾರೆ...!

ಇದು ಬಿಜೆಪಿ ಸಂಸದ ಅನಂತಕುಮಾರ್​ ಹೆಗಡೆ ನೀಡಿರುವ ಹೇಳಿಕೆ. ಬಿಎಸ್​ಎನ್​ಎಲ್​ ಸಿಬ್ಬಂದಿಯನ್ನು ದೇಶದ್ರೋಹಿಗಳು ಎಂದೇ ಸಂಬೋಧಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಡಿಯೋ ಸಂವಾದದ (ವರ್ಚುಯಲ್​) ಮೂಲಕ ಮಾತನಾಡಿರುವ ಅನಂತಕುಮಾರ್​ ಹೆಗಡೆ ಈ ಹೇಳಿಕೆ ನೀಡಿದ್ದಾರೆಂದು ಹೇಳಲಾಗಿದೆ.

ಸಂಕಷ್ಟದಲ್ಲಿರುವ ಸಂಸ್ಥೆಯನ್ನು ಉಳಿಸಲು ಸಿಬ್ಬಂದಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ. ನೌಕರರು ಸೋಮಾರಿ, ಅಸಮರ್ಥರಾಗಿರುವುದರಿಂದಲೇ ಸರ್ಕಾರಿ ಸಂಸ್ಥೆ ಅಧೋಗತಿಗೆ ಇಳಿದಿದೆ. ಹೀಗಾಗಿ ಅವರನ್ನು ದೇಶದ್ರೋಹಿಗಳೆಂದೇ ಕರೆಯುತ್ತೇನೆ ಹೇಳಿರುವುದಾಗಿ ವರದಿಯಾಗಿದೆ.

ಬಿಎಸ್​ಎನ್​ಎಲ್​ ದೇಶದ್ರೋಹಿಗಳಿಂದಲೇ ತುಂಬಿ ಹೋಗಿದೆ. ಸರ್ಕಾರ ಅವರಿಗೆ ಹಣ ನೀಡಿದೆ, ಮೂಲಸೌಕರ್ಯ ಒದಗಿಸಿದೆ. ಜನರಿಗೆ ಸೇವೆ ಬೇಕಾಗಿದ್ದರೂ ಕಾರ್ಯನಿರ್ವಹಿಸುತ್ತಿಲ್ಲ. ಪ್ರಧಾನಿ ಡಿಜಿಟಲ್​ ಇಂಡಿಯಾದ ಕನಸು ಹೊಂದಿದ್ದಾರೆ. ಇದಕ್ಕಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಿದ್ದಾರೆ. ಹೀಗಿದ್ದರೂ ಇವರು ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

ಸಂಸ್ಥೆಯನ್ನು ಸರಿಪಡಿಸಲು ಇರುವ ಒಂದೇ ಮಾರ್ಗವೆಂದರೆ ಖಾಸಗಿಯವರಿಗೆ ವಹಿಸುವುದು ಹಾಗೂ 88 ಸಾವಿರ ನೌಕರರನ್ನು ವಜಾಗೊಳಿಸುವುದು. ಸರ್ಕಾರ ಹೀಗೆ ಮಾಡಲಿದೆ ಎಂದು ಅನಂತಕುಮಾರ್​ ಹೇಳಿದ್ದಾರೆ.