ನ್ಯೂಸ್

ಸಂಪುಟ ವಿಸ್ತರಣೆ: ಸಿಎಂ ಬಿಎಸ್​ವೈಗೆ ಇರುವ ಮುಂದಿನ ಸವಾಲುಗಳೇನು?

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಂಪುಟಕ್ಕೆ 10 ಹೊಸ ಶಾಸಕರು ಸೇರ್ಪಡೆಯಾಗಿದ್ದು, ಮಂತ್ರಿಮಂಡಲದ ಗಾತ್ರ 18 ರಿಂದ 28ಕ್ಕೆ ಹಿಗ್ಗಿದೆ. ಆದರೆ, ಖಾಲಿ ಉಳಿದಿರುವ ಆರು ಸ್ಥಾನಗಳ ಮೇಲೆ ಹಲವರು ಕಣ್ಣಿಟ್ಟಿದ್ದು, ಸಂಕಟ ಇನ್ನೂ ಹಾಗೆಯೇ ಉಳಿದಿದೆೆ.

ಸಿಎಂಗಿರುವ ಮುಂದಿನ ಸವಾಲುಗಳೇನು?

# ಖಾತೆ ಹಂಚಿಕೆಯಲ್ಲಿ ಯಾರಿಗೂ ನೋವಾಗದಂತೆ ಗಮನವಹಿಸುವುದು

# ಮೂಲ ಬಿಜೆಪಿಗರು ಬಂಡಾಯ ಏಳದಂತೆ ನೋಡಿಕೊಳ್ಳುವುದು

# ಹೈಕಮಾಂಡ್ ಇಟ್ಟಿರುವ ವಿಶ್ವಾಸಕ್ಕೆ ತಮ್ಮ ಆಪ್ತರು ಧಕ್ಕೆ ತರದಂತೆ ಮೈ ಎಲ್ಲ ಕಣ್ಣಾಗಿರುವುದು

#  ಜೂನ್-ಜುಲೈನಲ್ಲಿ ಸಂಪುಟ ಪುನಾರಚನೆ ವೇಳೆ ಸೋತವರಿಗೆ ಅವಕಾಶ ನೀಡುವುದು

# ಖಾಲಿ ಇರುವ ಆರು ಸ್ಥಾನಗಳನ್ನು ತುಂಬುವಲ್ಲಿ ಜಾಗರೂಕವಾಗಿ ವರ್ತಿಸುವುದು

# ಪುನಾರಚನೆ ಆದಾಗ ಭಿನ್ನಮತಕ್ಕೆ ಅವಕಾಶ ಇಲ್ಲದಂತೆ ನೋಡಿಕೊಳ್ಳುವುದು

# ಮುಂದೆ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ಸಿಗುವಂತೆ ಮಾಡುವುದು

# ನೂತನ ಸಚಿವರ ಖಾತೆ ನಿರ್ವಹಣೆಯಲ್ಲಿ ಒಳ್ಳೆಯ ಹೆಸರು ಪಡೆಯುವಂತೆ ಮಾಡುವುದು

# ಆಡಳಿತ ಯಂತ್ರಕ್ಕೆ ಚುರುಕು ಮೂಡಿಸುವುದು

# ಸಚಿವರ ಬಳಿ ಇದ್ದ ಹೆಚ್ಚುವರಿ ಖಾತೆಗಳಿಗೆ ನ್ಯಾಯ ಒದಗಿಸಲು ಪ್ರಯತ್ನಿಸುವುದು