ನ್ಯೂಸ್

ಅಣ್ಣ ತಂಗಿ ಆತ್ಮಹತ್ಯೆ

ಚಿಂಚೋಳಿ: ತಾಲೂಕಿನ ಪಟಪಳ್ಳಿ ಗ್ರಾಮದ ಬಾವಿಯಲ್ಲಿ ಬಿದ್ದು ಅಣ್ಣ ತಂಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಸಂದೀಪ್ (23) ನಂದಿನಿ‌ (19) ಮೃತ ಸಹೋದರ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡವರು.

ಮದುವೆ ವಿಚಾರದಲ್ಲಿ ಮನೆಯಲ್ಲಿ ಗಲಾಟೆ ಮಾಡಿಕೊಂಡಿದ್ದ ನಂದಿನಿ. ಬಳಿಕ ಮನೆಯಿಂದ ಹೋರ ಹೊಗಿ ಬಾವಿಗೆ ಹಾರಿದ ನಂದಿನಿ. ನಂದಿನಿಯ ಹಿಂದದೆಯೇ ತೆರಳಿದ ಸಹೋದರ ಸಂದೀಪ್.

ಸಹೋದರಿ ಬಾವಿಗೆ ಹಾರಿರೋದನ್ನ ಕಂಡು ಬಾವಿಗೆ ಹಾರಿದ ಸಂದೀಪ್. ಈಜು ಬಾರದೆ ಅಣ್ಣ ತಂಗಿಯಿಬ್ಬರು ಬಾವಿಯಲ್ಲಿ ಮುಳಗಿ ಸಾವಾಗಿದೆ.

ಪಟಪಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿರುವ ಘಟನೆ ನಡೆದಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.