ಶ್ರೀನಗರ: ಅಂದಾಜು 7 ತಿಂಗಳ ಬಳಿಕ ಕಣಿವೆ ರಾಜ್ಯದಲ್ಲಿ ಸ್ಥಗಿತಗೊಂಡಿದ ಇಂಟರ್ನೆಟ್ ಹಾಗೂ ಬ್ರಾಡ್ಬ್ಯಾಂಡ್ ಸೇವೆಯನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತ ಗುರುವಾರದಿಂದ ಮರು ಆರಂಭಿಸಿದೆ.
ಕಳೆದ ವರ್ಷ ಆ.5ರಂದು ಕಣಿವೆ ರಾಜ್ಯಕ್ಕೆ ಸಂವಿಧಾನದಲ್ಲಿ ವಿಶೇಷ ಅಧಿಕಾರ ನೀಡುವ 370ನೇ ವಿಧಿ ರದ್ದುಗೊಳಿಸಿದ ನಂತರ ಇಂಟರ್ನೆಟ್ ಹಾಗೂ ಬ್ರಾಡ್ಬ್ಯಾಂಡ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಕಣಿವೆ ರಾಜ್ಯದಲ್ಲಿ 2ನೇ ತಲೆಮಾರಿನ ತರಂಗಳ ವೇಗ (2ಜಿ ಸ್ಪೀಡ್) ಹೊಂದಿರುವ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲು ಜಮ್ಮು ಮತ್ತು ಕಾಶ್ಮೀರ ಆಡಳಿತ ನಿರ್ಧರಿಸಿ ಮಾ. 4ರಂದು ಸುತ್ತೊಲೆ ಹೊರಡಿಸಿದೆ.
ಕಣಿವೆ ರಾಜ್ಯದಲ್ಲಿ ಇಂಟರ್ನೆಟ್ ಸೌಲಭ್ಯವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಕೆಲವರು ಸುಪ್ರೀಂಕೊರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ವಿಚಾರಣೆ ನಡೆಸಿ ಅಂತರ್ಜಾಲ ಸೌಲಭ್ಯ ಬಳಕೆ ಮನುಷ್ಯರ ಮೂಲಭೂತ ಹಕ್ಕು ಇದನ್ನು ಕಸಿಯುವಂತಿಲ್ಲ ಎಂದು ತೀರ್ಪು ನೀಡಿತು. (ಏಜೆನ್ಸೀಸ್)