ನ್ಯೂಸ್

ಭಗವದ್ಗೀತೆ ಮೇಲೆ ಪ್ರಮಾಣವಚನ ಸ್ವೀಕರಿಸಿದ ಬ್ರಿಟನ್​ ಸಂಸದೆ!

ಲಂಡನ್​ :ಯುಕೆ ಸಂಸತ್​ ಚುನಾವಣೆ ಮುಗಿದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ಬಾರಿ ಲೀಸೆಸ್ಟರ್ ಪೂರ್ವದಿಂದ ಸಂಸದೆಯಾಗಿ ಆಯ್ಕೆಯಾಗಿರುವ ಶಿವಾನಿ ರಾಜಾ ಸಂಸತ್​ನಲ್ಲಿ ಪವಿತ್ರ ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಇತಿಹಾಸ ನಿರ್ಮಿಸಿದರು.

29 ವರ್ಷದ ಭಾರತೀಯ ಮೂಲದ ಶಿವಾನಿ, ಬ್ರಿಟನ್ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಸಾಮಾಜಿಕ ಜಾಲತಾಣ 'X' ಖಾತೆಯಲ್ಲಿ ಪೋಸ್ಟ್​ ಹಾಕಿದ್ದು, ಹೆಮ್ಮೆಯ ಭಗವದ್ಗೀತೆ ಮೇಲೆ ಪ್ರಮಾಣವಚನ ಸ್ವೀಕರಿಸಿರುವುದು ನನಗೆ ಗೌರವದ ವಿಚಾರವಾಗಿದೆ. ನಾನು ಈ ಮೂಲಕ ಹಿಸ್ ಮೆಜೆಸ್ಟಿ ಕಿಂಗ್ ಚಾರ್ಲ್ಸ್‌ಗೆ ನನ್ನ ನಿಷ್ಠೆಯನ್ನು ಪ್ರತಿಜ್ಞೆ ಮಾಡಲು ನಿಜವಾಗಿಯೂ ಹೆಮ್ಮೆಪಡುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಇತ್ತೀಚಿನ ಸಂಸತ್ತಿನ ಚುನಾವಣೆಯಲ್ಲಿ ಶಿವಾನಿ ಕನ್ಸರ್ವೇಟಿವ್ ಪಕ್ಷದಿಂದ ಲೀಸೆಸ್ಟರ್ ಪೂರ್ವ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲಿ ಲೇಬರ್ ಪಕ್ಷದ 37 ವರ್ಷಗಳ ಪ್ರಾಬಲ್ಯವನ್ನು ಕೊನೆಗೊಳಿಸಿದ್ದರು. ಲೇಬರ್​ ಪಕ್ಷದ ಅಭ್ಯರ್ಥಿ ರಾಜೇಶ್ ಅಗರವಾಲ್ ವಿರುದ್ಧ ಶಿವಾನಿ ಸ್ಪರ್ಧಿಸಿ 4ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ.