ನ್ಯೂಸ್

ತಾಲಿಬಾನಿ ಭಯೋತ್ಪಾದಕನ ಜತೆ ಪ್ರೀತಿಯಲ್ಲಿ ಬಿದಿದ್ದ ಬ್ರಿಟನ್ ವ್ಯಕ್ತಿ! ಇದೊಂದು ಪ್ರವಾಸದಲ್ಲಿ ನಡೆದ ವಿಚಿತ್ರ ಪ್ರೇಮಕಥೆ.. British man  falls in love with a Taliban

British man  falls in love with a Taliban:  ಅಫ್ಘಾನಿಸ್ತಾನ ಎಂಬ ಹೆಸರು ಕೇಳಿದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಅಪಾಯಕಾರಿ ತಾಲಿಬಾನ್  ನೆನಪು. ಆದರೆ, ಇತ್ತೀಚಿನ ದಿನಗಳಲ್ಲಿ ಒಬ್ಬ ಬ್ರಿಟಿಷ್ ಪ್ರವಾಸಿಗನೊಬ್ಬ ತಾಲಿಬಾನಿ ಭಯೋತ್ಪಾದಕನ ಜತೆ ಪ್ರೀತಿಯಲ್ಲಿ ಬಿದ್ದ ಸ್ಟೋರಿ​​ ಬೆಳಕಿಗೆ ಬಂದಿದೆ.

2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಾಗ, ಪ್ರಪಂಚದಾದ್ಯಂತ ಭೀತಿಯ ವಾತಾವರಣವಿತ್ತು. ಮಹಿಳೆಯರು, ಮಕ್ಕಳು ಮತ್ತು ಪುರುಷರು ಸಹ ಅಫ್ಘಾನಿಸ್ತಾನದಿಂದ ಪಲಾಯನ ಮಾಡಲು ಬಯಸಿದ್ದರು.  ಆದರೆ ಈ ಮಧ್ಯೆ, ಅನೇಕ ವಿದೇಶಿ ಪ್ರವಾಸಿಗರು ಅಫ್ಘಾನಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ ಮತ್ತು ಅಲ್ಲಿನ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ, ಒಬ್ಬ ಬ್ರಿಟಿಷ್ ಪ್ರಯಾಣಿಕನು ಸಹ ಅಫ್ಘಾನಿಸ್ತಾನವನ್ನು ತಲುಪಿದನು ಮತ್ತು ಅಲ್ಲಿಗೆ ತನ್ನ ಪ್ರಯಾಣದ ಬಗ್ಗೆ ಆಘಾತಕಾರಿ ವಿಷಯಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದನು. ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಅವನು ತಾಲಿಬಾನ್ ಭಯೋತ್ಪಾದಕನನ್ನು ಪ್ರೀತಿಸುತ್ತಿದ್ದನು.

30 ವರ್ಷದ  ಟೊಯೋಸಿ ಒಸಿಡೆಂಡೆ ಎನ್ನುವ ವ್ಯಕ್ತಿ ಇಲ್ಲಿಯವರೆಗೆ 69 ದೇಶಗಳಿಗೆ ಪ್ರಯಾಣ ಬೆಳೆಸಿದ್ದಾನೆ.  ಕಳೆದ ವರ್ಷ ನವೆಂಬರ್‌ನಲ್ಲಿ ಪಾಕಿಸ್ತಾನದ ಮೂಲಕ ಅಫ್ಘಾನಿಸ್ತಾನಕ್ಕೆ ಪ್ರವಾಸ ಮಾಡಿದ್ದನು.  ಮೊದಲು ಬ್ರಿಟನ್‌ನಿಂದ ಇಸ್ಲಾಮಾಬಾದ್ ತಲುಪಿದ ಮತ್ತು ನಂತರ ಅಲ್ಲಿಂದ ಕಾರಿನಲ್ಲಿ ಪೇಶಾವರ್‌ಗೆ ತಲುಪಿದ. ಇಷ್ಟೆಲ್ಲಾ ಆದ ನಂತರ, ತಾಲಿಬಾನ್ ರಾಯಭಾರ ಕಚೇರಿಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಿತು ಮತ್ತು  ತಂಗಿದ್ದ ಹೋಟೆಲ್‌ನಲ್ಲಿ ಭದ್ರತೆಗಾಗಿ ಒಬ್ಬ ತಾಲಿಬಾನ್ ಅನ್ನು ನಿಯೋಜಿಸಲಾಯಿತು. ಈಗ ಅವನು ಯಾವುದೇ ಕಾರಣವಿಲ್ಲದೆ ಆತ ಕೋಣೆಗೆ ಮತ್ತೆ ಮತ್ತೆ ಬರುತ್ತಿದ್ದ.

ಬ್ರಿಟಿಷ್ ಪ್ರವಾಸಿ ಟೊಯೋಸಿ ಒಸಿಡೆಂಡೆ  ಒಂದು ವರ್ಷದ ಹಿಂದೆ, ಅಪಾಯಕಾರಿ ಎಂದು ಪರಿಗಣಿಸುವ ದೇಶಗಳಿಗೆ ಭೇಟಿ ನೀಡಲು ಪ್ರಾರಂಭಿಸಿದ್ದ ಈ ಪ್ರವಾಸದ ವೇಳೆ ಈತ ತಾಲಿಬಾನಿ ಭಯೋತ್ಪಾದಕನ ಪ್ರೀತಿಯಲ್ಲಿ ಬಿದ್ದಿದ್ದಾನೆ.

ನಾನು ಅವನನ್ನು ಟಿವಿ ನೋಡಲು ನನ್ನ ಕೋಣೆಗೆ ಆಹ್ವಾನಿಸಿದೆ ಮತ್ತು ಈ ಸಮಯದಲ್ಲಿ ನಾವು ಪ್ರಣಯಭರಿತರಾದೆವು. ತನ್ನ ತಾಲಿಬಾನ್ ಪ್ರೇಮಿ "ಉತ್ಸಾಹಭರಿತನಾಗಿದ್ದನು" ಮತ್ತು "ಅದನ್ನು ಚೆನ್ನಾಗಿ ಬಳಸಿಕೊಂಡನು. ನಂತರ ಅವನು ನನ್ನನ್ನು ಅಫ್ಘಾನಿಸ್ತಾನದ ಸುತ್ತಲೂ ಕರೆದೊಯ್ದನು, ಅಲ್ಲಿ ಅಫ್ಘಾನಿಸ್ತಾನದ ಬಗ್ಗೆ ಜಗತ್ತಿಗೆ ತಿಳಿದಿರುವ ವಿಷಯಗಳು ಸಂಪೂರ್ಣವಾಗಿ ತಪ್ಪಾಗಿವೆ ಎಂದು ನಾನು ಗಮನಿಸಿದೆ. ಟೊಯೋಸಿ ಕಾಬೂಲ್‌ನಲ್ಲಿ 6 ದಿನಗಳನ್ನು ಕಳೆದರು ಮತ್ತು ಪಾಕಿಸ್ತಾನದಲ್ಲಿ 5 ದಿನಗಳನ್ನು ಕಳೆದರು. ಪ್ರವಾಸವು 5300 ಡಾಲರ್‌ಗಳಲ್ಲಿ (4.5 ಲಕ್ಷ ರೂಪಾಯಿಗಳು) ಪೂರ್ಣಗೊಂಡಿತು ಎಂದು ಟೊಯೋಸಿ ಒಸಿಡೆಂಡೆ.

ನಾನು ಹಿಂತಿರುಗಿದಾಗಿನಿಂದ ನಾವು ಮಾತನಾಡುತ್ತಿದ್ದೇವೆ ಆದರೆ ಸ್ವಲ್ಪ ಸಮಯದ ನಂತರ ನಾನು ಅದನ್ನು ಬಿಡಬೇಕಾಯಿತು.  ಮಹಿಳೆಯರ ವೀಡಿಯೊಗಳನ್ನು ತೆಗೆಯುವುದು ಕಾನೂನುಬಾಹಿರ ಎಂದು ಟೊಯೋಸಿಯ ಪ್ರವಾಸ ಮಾರ್ಗದರ್ಶಿ ಹೇಳಿದ್ದರು ಮತ್ತು ಪಾಶ್ಚಿಮಾತ್ಯ ದೇಶಗಳು ಮಾಧ್ಯಮಗಳಲ್ಲಿ ಅಫ್ಘಾನಿ ಮಹಿಳೆಯರನ್ನು ನೋಡದಿರಲು ಇದೇ ಕಾರಣ. ಇಸ್ಲಾಮಿಕ್ ದೇಶಗಳಲ್ಲಿ ಕಠಿಣ ಶಿಕ್ಷೆಗಳಿರುವುದರಿಂದ ಅಪರಾಧಗಳು ಬಹಳ ಕಡಿಮೆ.   ಪ್ರವಾಸದ ಸಮಯದಲ್ಲಿನ  ಹಲವಾರು ಅಂಶಗಳನ್ನು ಅನುಭವಿಸಿದ ಕುರಿತಾಗಿ ಹಂಚಿಕೊಂಡಿದ್ದಾನೆ.