ನ್ಯೂಸ್

ಹೋಳಿ ಹಬ್ಬಕ್ಕೆ ಈ 5 ವಸ್ತುಗಳು ಮನೆಗೆ ತನ್ನಿ; ಲಕ್ಷ್ಮೀದೇವಿ ಆಗಮನದಿಂದ ಆರ್ಥಿಕ ಲಾಭ ನೋಡಿ.. | Goddess Lakshmi

Goddess Lakshmi ಹೋಳಿಯು ದೇಶದಾದ್ಯಂತ ಹೆಚ್ಚು ಉತ್ಸಾಹ ಮತ್ತು ಸಡಗರದಿಂದ ಆಚರಿಸಲಾಗುವ ಅತ್ಯಂತ ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಬಣ್ಣಗಳ ಹಬ್ಬ ಎಂದೂ ಕರೆಯಲ್ಪಡುವ ಹೋಳಿಯನ್ನು ಸಾಂಪ್ರದಾಯಿಕವಾಗಿ ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್‌ ಪ್ರಕಾರ ಆಚರಿಸಲಾಗುತ್ತದೆ.

ಹೀಗಾಗಿ, ಈ ಹೋಳಿಯು ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಇದು ಹಿಂದೂ ತಿಂಗಳ ಫಾಲ್ಗುಣದೊಂದಿಗೆ ಸಂಬಂಧವನ್ನು ಹೊಂದಿದೆ ಎಂದು ನಂಬಲಾಗಿದೆ. ಅಲ್ಲದೆ, ಈ ವರ್ಷ ಹೋಳಿ ಹಬ್ಬ ಮಾ.15ರಂದು ಬಂದಿದೆ. ಅಂದು ದೇಶಾದ್ಯಂತ ಹೋಳಿ ಆಚರಿಸಲಾಗುತ್ತದೆ.

ಈ ಬಣ್ಣಗಳ ಹಬ್ಬ ಕುಟುಂಬಗಳಲ್ಲಿ ಸಂತೋಷ ಮತ್ತು ಪ್ರೀತಿಯನ್ನು ತರುತ್ತದೆ ಎಂದು ನಂಬುತ್ತೇವೆ. ಅಲ್ಲದೆ,ಈ ಹಬ್ಬದ ಮುಂಚಿತವಾಗಿ ಕೆಲ ವಸ್ತುಗಳನ್ನು ಮೆನೆಗೆ ತಂದರೆ ರೋಗಗಳು, ದೋಷಗಳು, ಮಾನಸಿಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಜತೆ ಮನೆಗೆ ಲಕ್ಷ್ಮೀ ದೇವಿ ಆಗಮನ ಆಗುತ್ತದೆ ಎಂದು ನಂಬಲಾಗಿದೆ.

ಹೋಳಿ ಹಬ್ಬಕ್ಕೆ ಮುನ್ನ ಮನೆಗೆ ತುರುವ ವಸ್ತುಗಳು

1.ಬೆಳ್ಳಿ ನಾಣ್ಯ

ಫಾಲ್ಗುಣ ಪೂರ್ಣಿಮೆ ಹೋಳಿಕಾ ದಹನದ ದಿನದಂದು ಬರುತ್ತದೆ, ಈ ದಿನದಂದು ಮನೆಗೆ ಬೆಳ್ಳಿ ನಾಣ್ಯ ಮತ್ತು ಬೆಳ್ಳಿ ಆನೆಯನ್ನು ತರುವುದು ಶುಭ. ಲಕ್ಷ್ಮಿ ದೇವಿಯು ಮನೆಗೆ ಬೆಳ್ಳಿ ನಾಣ್ಯವನ್ನು ತರುವ ಮೂಲಕ ಸಂತೋಷಪಡುತ್ತಾಳೆ.

2.ತೋರಣ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರದಲ್ಲಿ ಬಂದನ್ವಾರ್ ಅಂದರೆ ತೋರಣವನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಆದ್ದರಿಂದ, ಹೋಳಿ ಹಬ್ಬದ ಮೊದಲು, ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ತೋರಣವನ್ನು ಇರಿಸಿ. ಇದು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ.

3.ಬಿದಿರು ಗಿಡ

ವಾಸ್ತುದಲ್ಲಿ, ಬಿದಿರಿನ ಗಿಡ ಅಂದರೆ ಬಿದಿರಿನ ಮರವನ್ನು ಅದೃಷ್ಟದ ಸಸ್ಯವೆಂದು ಪರಿಗಣಿಸಲಾಗುತ್ತದೆ. ಹೋಳಿಯಂದು ನೀವು ಬಿದಿರಿನ ಮರವನ್ನು ನಿಮ್ಮ ಮನೆಗೆ ತರಬಹುದು. ಮನೆ ಅಥವಾ ಕಚೇರಿಯಲ್ಲಿ ಬಿದಿರಿನ ಗಿಡವನ್ನು ನೆಡುವುದರಿಂದ ಅದೃಷ್ಟ ಬರುತ್ತದೆ ಮತ್ತು ಸಂತೋಷ, ಶಾಂತಿ ಮತ್ತು ಸಮೃದ್ಧಿ ಉಳಿಯುತ್ತದೆ.

4.ಆಮೆ

ಆಮೆಯನ್ನು ದೈವಿಕ ರೂಪವೆಂದು ಪರಿಗಣಿಸಲಾಗುತ್ತದೆ. ಹೋಳಿ ಹಬ್ಬದಂದು ನೀವು ಲೋಹದ ಆಮೆಯನ್ನು ಮನೆಗೆ ತಂದರೆ, ಲಕ್ಷ್ಮಿ ದೇವಿಯ ಆಶೀರ್ವಾದವು ಮನೆಯ ಮೇಲೆ ಉಳಿಯುತ್ತದೆ ಎಂದು ನಂಬಲಾಗಿದೆ. ಆದರೆ ಶ್ರೀಯಂತ್ರ ಅಥವಾ ಕುಬೇರ ಯಂತ್ರವನ್ನು ಆಮೆಯ ಹಿಂಭಾಗದಲ್ಲಿ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ.

5.ಹೋಳಿಕಾಳ ಚಿತಾಭಸ್ಮ

ಹೋಳಿಗೆ ಮೊದಲು ಹೋಳಿಕಾ ದಹನ್‌ಗೆ(ರಾಕ್ಷಸನನ್ನು ದಹನ ಮಾಡುವುದು) ಸುಟ್ಟು ಪೂಜೆ ಸಲ್ಲಿಸಲಾಗುತ್ತದೆ. ಮರುದಿನ ಹೋಳಿಯಂದು, ಹೋಳಿಕಾಳ ಚಿತಾಭಸ್ಮವನ್ನು ಮನೆಗೆ ತಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ತಿಜೋರಿಯಲ್ಲಿ ಇರಿಸಿ. ಇದು ಬಡತನವನ್ನು ಹೋಗಲಾಡಿಸುತ್ತದೆ ಎಂದು ಹೇಳಲಾಗುತ್ತದೆ.(ಏಜೆನ್ಸಿಸ್​)