ಸಾಂದರ್ಭಿಕ ಚಿತ್ರ 
ನ್ಯೂಸ್

ಡ್ರೈ ಕ್ಲೀನ್‌ಗೆ ಬಟ್ಟೆ ಕೊಡೋಕೆ ಹೋದ ಮದುಮಗಳು 6 ಮಕ್ಕಳ ತಂದೆ ಜತೆ ಎಸ್ಕೇಪ್!

ಭೋಪಾಲ್: ವಧುವೊಬ್ಬಳು ಮದುವೆಗೆ ಒಂದು ದಿನ ಮುಂಚಿತವಾಗಿ 6 ಮಕ್ಕಳ ತಂದೆಯೊಂದಿಗೆ ಓಡಿಹೋದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.

ಬಟ್ಟೆ ಡ್ರೈ-ಕ್ಲೀನ್​​ಗೆ ಕೊಟ್ಟು ಬರುತ್ತೇನೆ ಅಂತ ಮನೆಯಿಂದ ಹೊರ ಬಂದ ಯುವತಿ ಗೆಳೆಯನೊಂದಿಗೆ ಪರಾರಿಯಾಗಿದ್ದಾಳೆ. ಮಾರ್ಚ್​ 15ರಂದು ಈ ಘಟನೆ ನಡೆದಿದೆ.

ಮನೆಯಿಂದ ಓಡಿ ಹೋಗುವಾಗ ಮನೆಯಲ್ಲಿದ್ದ ನಗದು ಹಣವನ್ನು ತೆಗೆದುಕೊಂಡು ಹೋಗಿದ್ದಾಳೆ. ಯುವತಿ ಮನೆ ಬಿಟ್ಟು ತೆರಳುವ ಮುನ್ನ ಪತ್ರವೊಂದನ್ನು ಬರೆದು ತನ್ನ ರೂಮ್​​ನಲ್ಲಿಟ್ಟಿದ್ದು, ಪತ್ರದಲ್ಲಿ ತನಗೆ ಇಷ್ಟ ಆಗಿರುವ ವ್ಯಕ್ತಿಯೊಂದಿಗೆ ಹೊರಟು ಹೋಗುತ್ತಿದ್ದಾಗಿ ಬರೆದಿದ್ದಾಳೆ ಎನ್ನಲಾಗಿದೆ. ಈಗಾಗಲೇ ಮದುವೆಯಾಗಿ 6 ಮಕ್ಕಳನ್ನು ಹೊಂದಿರುವ ವ್ಯಕ್ತಿಯೊಂದಿಗೆ ಪರಾರಿಯಾಗಿರುವುದು ಕುಟುಂಬಸ್ಥರಿಗೆ ತಿಳಿದು ಆಘಾತವಾಗಿದೆ.

ಸದ್ಯ ಯುವತಿಯ ಪೋಷಕರು ಪೊಲೀಸರ ಮೊರೆ ಹೋಗಿದ್ದು, ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ಯುವತಿಯೊಂದಿಗೆ ನಾಪತ್ತೆಯಾಗಿರುವ ವ್ಯಕ್ತಿಯ ಪತ್ನಿ ಕೂಡ ಪೊಲೀಸ್​ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭ ಮಾಡಿದ್ದು, ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.