ನ್ಯೂಸ್

ಮೇಕಪ್​ ಮಾಡಿಸಿಕೊಳ್ಳಲು ಬ್ಯೂಟಿಪಾರ್ಲರ್​​ಗೆ ಹೋಗಿದ್ದ ವಧುವಿನ ಕತ್ತು ಕೊಯ್ದು ಕೊಂದ ಮಾಜಿ ಲವರ್​​

ಇಂಧೋರ್​: ಆಕೆ ವಧು. ತನ್ನ ಮದುವೆಗೆ ಕೆಲವೇ ಹೊತ್ತು ಇರುವಾಗ ಅಲಂಕಾರ ಮಾಡಿಸಿಕೊಳ್ಳಲು ಬ್ಯೂಟಿ ಪಾರ್ಲರ್​ಗೆ ಹೋಗಿದ್ದಳು. ಆದರೆ ಮುಂದಾಗಿದ್ದು ಬಹುದೊಡ್ಡ ದುರಂತ.

ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಜೌರಾ ಪಟ್ಟಣದಲ್ಲಿ ಘಟನೆ ನಡೆದಿದೆ. ವಧು ಮೇಕಪ್​ ಮಾಡಿಸಿಕೊಳ್ಳಲು ತಮ್ಮ ಮನೆಯ ಸಮೀಪದ ಬ್ಯೂಟಿ ಪಾರ್ಲರ್​ಗೆ ತೆರಳಿದ್ದಾಗ, ಆಕೆಯ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ಯುವತಿಯ ಮಾಜಿ ಲವರ್​​ನ ಕೆಲಸ ಇದು ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ ಆತ ಯುವತಿಯನ್ನು ಹತ್ಯೆ ಮಾಡಿ, ರಾಜಸ್ಥಾನಕ್ಕೆ ಪರಾರಿಯಾಗಿದ್ದಾನೆ. ಆರೋಪಿಗೆ ಸಹಾಯ ಮಾಡಿದ ಅವನ ಗೆಳೆಯನನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.

ಕೊಲೆಯಾದ ಯುವತಿಯನ್ನು ಸೋನು ಯಾದವ್​ ಎಂದು ಗುರುತಿಸಲಾಗಿದೆ. ಈಕೆ ಶಾಜಾಪುರದ ನಿವಾಸಿ. ಸೋನುಗೆ ಇದು ಎರಡನೇ ಮದುವೆ. ವಿವಾಹ ಕಾರ್ಯಕ್ರಮ ನಡೆಯುವ ದಿನದ ಬೆಳಗ್ಗೆ ಜೌರಾ ಪಟ್ಟಣಕ್ಕೆ, ಕುಟುಂಬದವರೊಂದಿಗೆ ಆಗಮಿಸಿದ್ದಳು.

ನಂತರ ಮೇಕಪ್​ ಮಾಡಿಸಿಕೊಳ್ಳಲು ಹತ್ತಿರದ ಬ್ಯೂಟಿ ಪಾರ್ಲರ್​​ಗೆ ತನ್ನ ಕಸಿನ್​ ಜತೆ ಹೋಗಿದ್ದಳು. ಅಲ್ಲಿ ಆಕೆಗೆ ಒಂದೇ ಸಮ ಫೋನ್​ ಬರಲು ಶುರುವಾಯಿತು. ಅದು ರಾಮ್​ ಯಾದವ್​ ಎಂಬುವನದ್ದು. ಈತನೇ ಆಕೆಯ ಮಾಜಿ ಲವರ್​ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಸೋನು ಆ ಕರೆಯನ್ನು ಸ್ವೀಕರಿಸದೆ ನಿರ್ಲಕ್ಷಿಸಿದ್ದಳು. ಆದರೆ ಅಷ್ಟಕ್ಕೇ ಸುಮ್ಮನಾಗದ ಆತ, ಸ್ಥಳಕ್ಕೇ ಬಂದು ವಧುವಿನ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಆತ್ಮಹತ್ಯೆಗೆ ಶರಣಾದ ಗುರುರಾಘವೇಂದ್ರ ಸಹಕಾರ ಬ್ಯಾಂಕ್​​ನ ಮಾಜಿ ಸಿಇಒ

ಅವನ ಸಹಚರನೋರ್ವನನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಸೋನು ಯಾದವ್​ ಹಾಗೂ ರಾಮ್​ ಯಾದವ್​ ನಡುವೆ ಅಫೇರ್​ ಇತ್ತು ಎಂಬುದನ್ನು ಆತ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಆರೋಪಿಯ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. (ಏಜೆನ್ಸೀಸ್​)