ಕೋಲಾರ: ಭೂ ಪರಿವರ್ತನೆಗಾಗಿ ಅರ್ಜಿದಾರನಿಂದ ಲಂಚ ಸ್ವೀಕರಿಸುತ್ತಿದ್ದ ಜಿಲ್ಲಾಧಿಕಾರಿ ಕಚೇರಿ ಕಂದಾಯ ಅಧಿಕಾರಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೋಸಕೋಟೆ ಮಹೇಶ್ ಎಂಬುವರು ಜಿಲ್ಲೆಯ ಮಾಲೂರು ತಾಲೂಕಿನ ಆಲಂಬಾರಡಿ ಗ್ರಾಮದ ಸಮೀಪದ ೫ ಎಕರೆ ಭೂ ಪರಿವರ್ತನೆಗೆ ಸಂಬಂಧಪಟ್ಟ ಶಾಖೆಗೆ ಅರ್ಜಿಸಲ್ಲಿಸಿದ್ದರು. ಕೆಲಸ ಮಾಡಿಕೊಡಲು ಕಂದಾಯ ಅಽಕಾರಿ ಗೋಪಾಲಕೃಷ್ಣ 8.5 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದ.
ಅದರಂತೆ ಸೋಮವಾರ ಅರ್ಜಿದಾರ ಮಹೇಶ್, ಭೂ ಪರಿವರ್ತನಾ ಶಾಖೆಯ ಆರ್‌ಐಗೆ 8.5ಲಕ್ಷ ರೂ. ಲಂಚ ನೀಡುತ್ತಿದ್ದ ಸಮಯಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಗೋಪಾಲಕೃಷ್ಣನನ್ನು ವಶಕ್ಕೆ ಪಡೆದಿದ್ದಾರೆ. ಕೇಸ್‌ವರ್ಕರ್ ನಾಗೇಂದ್ರ ವಿರುದ್ಧವೂ ದೂರು ನೀಡಿದ್ದಾರೆ ಎನ್ನಲಾಗಿದ್ದು, ಲೋಕಾಯುಕ್ತ ಎಸ್ಪಿ ಧನಂಜಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.