ನ್ಯೂಸ್

ದಿನಕ್ಕೆ 10 ಕೆಜಿ ಅಚ್ಚ ಖಾರದ ಪುಡಿ ತಿನ್ನುವ ಈತನಿಗೆ ಖಾಸಗಿ ಅಂಗ ಕ್ಲೀನ್​ ಮಾಡಿಕೊಳ್ಳಲು ಅದೇ ಬೇಕಂತೆ! Chili Powder

Chili Powder : ಅಚ್ಚ ಖಾರದ ಪುಡಿ ಅಥವಾ ಚಿಲ್ಲಿ ಪುಡಿಯನ್ನು ಊಟದಲ್ಲಿ ಬಿಟ್ಟು ಹಾಗೇ ತಿನ್ನಲು ಯಾರೂ ಕೂಡ ಬಯಸುವುದಿಲ್ಲ. ಖಾರದ ಪುಡಿಯನ್ನು ಕೈಗಿಟ್ಟರೆ ಸಾಕು ಮೊದಲ ಅದನ್ನು ಕೆಳಗಡೆ ಹಾಕಿ ತಕ್ಷಣ ಕೈ ತೊಳೆದುಕೊಳ್ಳುತ್ತಾರೆ. ಏಕೆಂದರೆ, ಅಪ್ಪಿತಪ್ಪಿ ಖಾರದ ಪುಡಿ ಕಣ್ಣಿಗೆ ಬಿದ್ದರೆ ಅದಕ್ಕಿಂತ ನರಕ ಬೇರೊಂದಿಲ್ಲ. ಮೈಗೆ ಸೋಕಿದರು ಕೂಡ ಸಿಕ್ಕಾಪಟ್ಟೆ ಉರಿಯುತ್ತದೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿಗೆ ಅಚ್ಚ ಖಾರದ ಪುಡಿ ಇಲ್ಲ ಅಂದರೆ ಆ ದಿನ ಪೂರ್ತಿ ಆಗೋದೇ ಇಲ್ಲ ಎನ್ನುತ್ತಿದ್ದಾನೆ. ಕೇವಲ ತಿನ್ನಲು ಮಾತ್ರವಲ್ಲ, ಮುಖ ತೊಳೆಯಲು ಕೂಡ ಖಾರದ ಪುಡಿ ಬೇಕಂತೆ! ಇದನ್ನು ಕೇಳಿದಾಗ ನೀವು ನಂಬದಿರಬಹುದು ಆದರೆ, ಇದೇ ಸತ್ಯ.

ಹೌದು, ಒಬ್ಬ ಯುವಕ ಒಂದೇ ಬಾರಿಗೆ 10 ಕೆಜಿಯಷ್ಟು ಖಾರದ ಪುಡಿ ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯ ಬಟಾವ್ ಗ್ರಾಮದ ರೈತ ರಾಮ್ ಪಿರ್ತು ಅವರ ವಿಡಿಯೋವನ್ನು ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅಂದಹಾಗೆ, ಇದು ಹಳೆಯ ವಿಡಿಯೋ ಆಗಿದ್ದು, ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ವೈರಲ್​ ವಿಡಿಯೋದಲ್ಲಿ ಯುವಕ ಯಾವುದೇ ತೊಂದರೆಯಿಲ್ಲದೆ ಮೆಣಸಿನ ಕಾಯಿಯನ್ನು ಜಜ್ಜಿ, ಅಚ್ಚರ ಖಾರದ ಪುಡಿ ತಿನ್ನುತ್ತಿರುವುದನ್ನು ಕಾಣಬಹುದು. ಆತ ಒಂದೇ ಒಂದು ಕಣ್ಣೀರು ಅಥವಾ ಬೆವರು ಸಹ ಸುರಿಸಲಿಲ್ಲ ಎಂಬುದು ಗಮನಾರ್ಹ.

ವಿಡಿಯೋದಲ್ಲಿ, ಊಟದ ನಂತರ ಉಳಿದ ಮೆಣಸಿನ ಪುಡಿಯನ್ನು ಆತ ಮುಖಕ್ಕೆ ಉಜ್ಜಿಕೊಳ್ಳುವುದನ್ನು ಸಹ ಕಾಣಬಹುದು. ಯುವಕನು ವಿಡಿಯೋದಲ್ಲಿ ಕೆಲವು ಹೇಳಿಕೆಗಳನ್ನು ಸಹ ನೀಡಿದ್ದು, ತನ್ನ ಖಾಸಗಿ ಭಾಗಗಳನ್ನು ಸ್ವಚ್ಛಗೊಳಿಸಲು ಸೋಪಿನ ಬದಲಿಗೆ ಮೆಣಸಿನ ಪುಡಿಯನ್ನು ಬಳಸುವುದಾಗಿ ತಿಳಿಸಿದ್ದಾನೆ. ಆದರೆ, ಅದನ್ನು ಸಾಬೀತು ಪಡಿಸುವ ಯಾವುದೇ ಪುರಾವೆಗಳು ವಿಡಿಯೋದಲ್ಲಿ ಒದಗಿಸಿಲ್ಲ.

ಮೆಣಸಿನಕಾಯಿ ನನ್ನ ಜೀವನದ ಒಂದು ಭಾಗವಾಗಿದೆ. ನಾನು ಬಾಲ್ಯದಿಂದಲೂ ಮೆಣಸಿನಕಾಯಿ ಅಥವಾ ಖಾರದ ಪುಡಿಯನ್ನು ತಿನ್ನುತ್ತಿದ್ದೇನೆ ಮತ್ತು ಅನೇಕರು ಇದನ್ನು ಅನುಕರಿಸಲು ಪ್ರಯತ್ನಿಸಿದ್ದಾರೆ ಆದರೆ, ಅದು ಸಾಧ್ಯವಾಗಿಲ್ಲ ಎಂದು ರಾಮ್ ಪಿರ್ತು ಹೇಳುತ್ತಾರೆ.

ರಾಮ್​ ಪಿರ್ತು ಅವರು ಜೀವನಶೈಲಿಯೂ ಇತರರಿಗೆ ಆಘಾತಕಾರಿಯಾಗಿದೆ. ರಾಮ್ ಪಿರ್ತು ಬೆಳಗ್ಗೆ ಚಿಲ್ಲಿ ಟೀ ಕುಡಿಯುವ ಮೂಲಕ ತನ್ನ ದಿನವನ್ನು ಪ್ರಾರಂಭಿಸುತ್ತಾನೆ. ಮಧ್ಯಾಹ್ನ ಚಿಲ್ಲಿ ಮಟನ್ ಕರಿ ತಿನ್ನುತ್ತಾನೆ. ಸಂಜೆ ಹಸಿರು ಮೆಣಸಿನಕಾಯಿ ತಿನ್ನುತ್ತಾನೆ. ಮೆಣಸಿನಕಾಯಿಯೇ ತನಗೆ ಔಷಧ ಎಂದು ಆತ ಹೇಳಿಕೊಳ್ಳುತ್ತಾನೆ. (ಏಜೆನ್ಸೀಸ್​)