‘ಆರ್ಆರ್ಆರ್’ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದೆ. ಎಸ್ಎಸ್ ರಾಜಮೌಳಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮಾಡಿರುವ ದಾಖಲೆಗಳು ಒಂದೆರಡಲ್ಲ. ಈಗ ಈ ಚಿತ್ರದ ಬಗ್ಗೆ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೋ ಲೂಲಾ ದೆ ಸೆಲ್ವಾ ಮಾತನಾಡಿದ್ದಾರೆ. ಶೃಂಗಸಭೆಯಲ್ಲಿ ಅವರು ಈ ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
‘ಆರ್ಆರ್ಆರ್' ಮೂರು ಗಂಟೆಯ ಫೀಚರ್ ಸಿನಿಮಾ. ಹಲವು ಫನ್ನಿ ದೃಶ್ಯ ಇದೆ. ಅದ್ಭುತ ನೃತ್ಯವಿದೆ. ಬ್ರಿಟಿಷರ ಆಡಳಿತದ ಬಗ್ಗೆ ತೀವ್ರ ಟೀಕೆಯೂ ಇದೆ. ಈ ಚಿತ್ರ ವಿಶ್ವಾದ್ಯಂತ ಬ್ಲಾಕ್ಬಸ್ಟರ್ ಸಿನಿಮಾ ಆಗಬೇಕು ನನ್ನ ಅಭಿಪ್ರಾಯ. ಭಾರತದ ಬಗ್ಗೆ ಯಾರೇ ಪ್ರಸ್ತಾಪಿಸಿದರೂ ನೀವು ‘ಆರ್ಆರ್ಆರ್’ ಸಿನಿಮಾ ನೋಡಿದ್ದೀರಾ ಎಂದು ಕೇಳುತ್ತಾರೆ. ಚಿತ್ರದ ನಿರ್ದೇಶಕರು ಮತ್ತು ಕಲಾವಿದರನ್ನು ನಾನು ಅಭಿನಂದಿಸುತ್ತೇನೆ. ಈ ಸಿನಿಮಾ ನನ್ನನ್ನು ಮೋಡಿ ಮಾಡಿದೆ’ ಎಂದಿದ್ದಾರೆ ಲೂಯಿಸ್ ಇನಾಸಿಯೋ ಲೂಲಾ ದೆ ಸೆಲ್ವಾ.
ಚಿತ್ರದಲ್ಲಿ ಜೂನಿಯರ್ ಎನ್ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಗಲ್ಲಅ ಪೆಟ್ಟಿಗೆಯನ್ನ ಭರಿಸುವಲ್ಲಿಯೂ ಯಶಸ್ವಿಯಾಗಿದೆ.