ರಾಣೆಬೆನ್ನೂರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಹಾಗೂ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಚುನಾವಣೆ ನಿಮಿತ್ತ ಭಾನುವಾರ ನಗರದ ಕೋಟೆಯ ಶ್ರೀ ಮೈಲಾರ ಲಿಂಗೇಶ್ವರ ದೇವಸ್ಥಾನ ಹಾಗೂ ಶಂಕರ ಮಠದಲ್ಲಿ ಮತದಾನ ಜರುಗಿತು.
ಜಿಲ್ಲಾ ಪ್ರತಿನಿಧಿಯಾಗಿ ದತ್ತಾತ್ರೇಯ ನಾಡಿಗೇರ 629 ಮತಗಳನ್ನು ಪಡೆದು ಡಾ. ಸಂಜಯ ನಾಯ್ಕ್ (366 ಮತ ) ಅವರನ್ನು 203 ಮತಗಳ ಅಂತರದಿಂದ ಸೋಲಿಸಿ ವಿಜಯಶಾಲಿಯಾದರು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪಧಿರ್ಸಿದ ಭಾನುಪ್ರಕಾಶ ಅವರಿಗೆ 765 ಮತಗಳು ಹಾಗೂ ಅವರ ಎದುರಾಳಿ ರಘುನಾಥ ಎಸ್. ಅವರಿಗೆ 201 ಮತಗಳು ಲಭಿಸಿವೆ.
ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ದತ್ರಾತ್ತೇಯ ನಾಡಿಗೇರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.