ನ್ಯೂಸ್

ಚಲಿಸುತ್ತಿದ್ದ 'ಕಾರಿನ ಸನ್‌ರೂಫ್‌'ನಿಂದ ಹೊರ ಬಂದ ಬಾಲಕನ ತಲೆ ತಡೆಗೋಡೆಗೆ ಡಿಕ್ಕಿ| Viral vedeo

ಬೆಂಗಳೂರು; ರಾಜ್ಯ ರಾಜಧಾನಿಯಲ್ಲಿ ನಡೆದ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚಲಿಸುತ್ತಿರುವ ಕಾರಿನ ಸನ್‌ರೂಫ್‌ನಿಂದ ಬಾಲಕನೊಬ್ಬ ಹೊರಬರುವಾಗ ಆತನ ತಲೆ ರಸ್ತೆ ಮೇಲೆ ಇದ್ದಂತಹ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.

ಶನಿವಾರ ಈ ಘಟನೆ ನಡೆದಿದ್ದು, ಈ ದುರಂತಕ್ಕೆ ರಸ್ತೆ ಸುರಕ್ಷತೆ ಮತ್ತು ಪೋಷಕರ ನಿರ್ಲಕ್ಷ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ. ಈ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್​ ಮಾಡಲಾಗಿದ್ದು, ಮುಂದಿನ ಬಾರಿ ನಿಮ್ಮ ಮಕ್ಕಳು ಕಾರ್​ನಿಂದ ತಲೆ ಎತ್ತಲು ಹೋದರೆ ಒಂದು ಬಾರಿ ಯೋಚಿಸಿ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

(ಏಜೆನ್ಸೀಸ್)

ಈ ವಿಡಿಯೋ ಇಂಟರ್​ನೆಟ್​ನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಅನೇಕ ಬಳಕೆದಾರರು ವಾಹನದಲ್ಲಿರುವ ವಯಸ್ಕರು ಇಂತಹ ಅಪಾಯಕಾರಿ ನಡವಳಿಕೆಯನ್ನು ಅನುಮತಿಸಿದ್ದಕ್ಕಾಗಿ ಅವರನ್ನು ಟೀಕಿಸಿದ್ದಾರೆ.

ಈ ವಿಡಿಯೋದಲ್ಲಿ ಕೆಂಪು ಬಣ್ಣದ SUV ವಾಹನವೊಂದು ಜನನಿಬಿಡ ರಸ್ತೆಯಲ್ಲಿ ಚಲಿಸುತ್ತಿರುವುದನ್ನು ತೋರಿಸಲಾಗಿದ್ದು, ಕಾರಿನ ಸನ್‌ರೂಫ್ ಮೂಲಕ ಬಾಲಕ ನಿಂತು ಪ್ರಯಾಣಿಸುತ್ತಿರುವುದನ್ನು ನೋಡಬಹುದು. ಕಾರು ಮುಂದಕ್ಕೆ ಚಲಿಸುತ್ತಿದ್ದಂತೆ, ಇದ್ದಕ್ಕಿದ್ದಂತೆ, SUV ಓವರ್‌ಹೆಡ್ ತಡೆಗೋಡೆಯನ್ನು ಸಮೀಪಿಸಿದ ಪರಿಣಾಮ ಮಗುವಿನ ತಲೆಗೆ ಬಲವಾಗಿ ಡಿಕ್ಕಿ ಹೊಡೆದಿದೆ.