ನ್ಯೂಸ್

Reels: ವೈರಲ್​ ಆಗಲು ವಿಚಿತ್ರ ಪ್ರಯತ್ನ.. ಗ್ಯಾಸ್​ ತಲೆಮೇಲೆ ಹೊತ್ತು ಹುಡುಗ ಮಾಡಿದ್ದೇನು ಗೊತ್ತಾ?

ನವದೆಹಲಿ: ರೀಲ್ಸ್​(Reels) ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಆಗಲು ಹಲವರು ಸಾರ್ವಜನಿಕ ಸ್ಥಳಗಳಲ್ಲಿ ವಿಚಿತ್ರ ನೃತ್ಯ ಮಾಡುತ್ತಿದ್ದಾರೆ. ಸದ್ಯ ಇಂತಹುದೇ ವಿಡಿಯೋವೊಂದು ಹರಿದಾಡುತ್ತಿದೆ. ಆ ವೀಡಿಯೋ ನೋಡಿದ ಜನ ಬೆಚ್ಚಿ ಬಿದ್ದಿದ್ದಾರೆ.

ಇನ್​ಸ್ಟಾಗ್ರಾಮ್​ ಹ್ಯಾಂಡಲ್ ಡೈಲಾಗ್​_ಸೂಪರ್​ಸ್ಟಾರ್​_28 ರಲ್ಲಿ ವೈರಲ್ ವಿಡಿಯೋ ಹಂಚಿಕೊಳ್ಳಲಾಗಿದೆ. ಅದರಲ್ಲಿರುವಂತೆ ಯುವಕನೊಬ್ಬ ತಲೆಯ ಮೇಲೆ ಸಿಲಿಂಡರ್ ಹೊತ್ತಿದ್ದಾನೆ. ಅವನ ಕುತ್ತಿಗೆಗೆ ಮಂಚ ಮತ್ತು ಗ್ಯಾಸ್ ಸ್ಟೌ ಅನ್ನು ಕಟ್ಟಲಾಗಿದೆ. ಆ ಮಂಚದ ಎರಡೂ ಬದಿ ಪಾತ್ರೆಗಳನ್ನು ಕಟ್ಟಿರುತ್ತಾರೆ. ಕುತ್ತಿಗೆಯಲ್ಲಿ ಬಾಟಲ್​, ಚೊಂಬು, ಸ್ಟೀಲ್​ ಕಪ್​ಗಳನ್ನು ನೇತುಹಾಕಿಕೊಂಡಿದ್ದಾನೆ. ಆ ವಿಚಿತ್ರ ಪೋಷಾಕಿನಲ್ಲಿ ಗ್ಯಾಸ್ ಸ್ಟೌವ್ ಅನ್ನು ಹಾರ್ಮೋನಿಯಂ ಆಗಿ ಮಾಡಿಕೊಂಡು ಅದನ್ನು ನುಡಿಸಿದಂತೆ ನಟಿಸುತ್ತಾ, ಹಾಡು ಹೇಳುತ್ತಾ ಕುಣಿಯುತ್ತಾನೆ. ಹುಡುಗನ ವಿಚಿತ್ರ ಚೇಷ್ಟೆಗಳನ್ನು ಆತನ ಸ್ನೇಹಿತರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋವನ್ನು 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 4.6 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಇದಕ್ಕೆ ನೆಟಿಜನ್‌ಗಳು ``ಈ ಹುಡುಗನಿಗೆ ಉರ್ಫಿ ಜಾವೇದ್‌ನ ಗಂಡನಾಗುವ ಅರ್ಹತೆ ಇದೆ'' ಎಂದು ಕೆಲವರು ಕಾಮೆಂಟ್​ ಮಾಡಿದ್ದರೆ, `ಅಣ್ಣ.. ಕೆಲವು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಿ'', `ಇದೇನು ಮೊಬೈಲ್ ಕಿಚನ್', ``ಮನೆಯಲ್ಲಿ ಬೇರೆ ವಸ್ತುಗಳು ಉಳಿದಿವೆಯೇ? ಎಂದು ಕಾಮೆಂಟ್‌ಗಳನ್ನು ಮಾಡಿದ್ದಾರೆ.