ನ್ಯೂಸ್

ಸೂರ್ಯಗ್ರಹಣ, ಅಮಾವಾಸ್ಯೆ; 8 ವರ್ಷದ ಬಾಲಕನ ಬಲಿ!

ಹೈದರಾಬಾದ್​: ಮೂಢನಂಬಿಕೆಗಳ ಹೆಸರಿನಲ್ಲಿ ನರಬಲಿ, ಪ್ರಾಣಿಗಳ ಬಲಿ ಕೊಡುವುದು ಇಂದಿಗೂ ನಿಂತಿಲ್ಲ. ಅಮವಾಸ್ಯೆ ಹಿನ್ನೆಲೆ ಬಾಲಕನನ್ನು ಬಲಿ ಕೊಡಲಾಗಿದೆ. ಈ ಘಟನೆ ಹೈದರಾಬಾದ್‌ನ ಸನತ್‌ನಗರದಲ್ಲಿ ನಡೆದಿದೆ.

ಅಬ್ದುಲ್ ವಾಹಿದ್ (8) ಮೃತ ಬಾಲಕ. ಈತನ ಮೃತ ದೇಹವನ್ನು ಸನತನಗರದ ಅಲ್ಲಾವುದ್ದೀನ್ ಕೋಟಿ ಪ್ರದೇಶದ ಕಾಲುವೆಯಲ್ಲಿ ಪತ್ತೆಯಾಗಿದೆ. ಅಮವಾಸ್ಯೆ ಇದ್ದ ಕಾರಣ ಬಾಲಕನನ್ನು ಬಲಿ ಕೊಡಲಾಗಿದೆ ಎಂದು ಸ್ಥಳೀಯರು ಶಂಕಿಸಿದ್ದಾರೆ.

ನಡೆದಿದ್ದೇನು?: ಅಲ್ಲಾದುನ್ ಕೋಟಿಯಲ್ಲಿ ವಾಸಿಂ ಖಾನ್ ಎಂಬ ವ್ಯಕ್ತಿ ಗಾರ್ಮೆಂಟ್ಸ್ ಅಂಗಡಿ ನಡೆಸುತ್ತಿದ್ದಾರೆ. ಈತ ಚಿಟ್ಸ್ ವ್ಯಾಪಾರ ನಡೆಸುತ್ತಿದ್ದ ಫಿಜಾ ಖಾನ್ ಎಂಬ ಮಂಗಳಮುಖಿಗೆ ಹಣ ಹಾಕಿದ್ದಾನೆ. ಹಣದ ವಿಚಾರವಾಗಿ ವಾಸಿಂ ಖಾನ್ ಮತ್ತು ಫಿಜಾ ಖಾನ್ ನಡುವೆ ಜಗಳವಾಗಿತ್ತು. ಗುರುವಾರ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಆ ದಿನ ಸಂಜೆ ವಾಸಿಂ ಖಾನ್ ಪುತ್ರ ಅಬ್ದುಲ್ ವಾಹಿದ್ ನನ್ನು ನಾಲ್ವರು ಅಪಹರಿಸಿದ್ದರು. ಅವರು ಬಾಲಕನನ್ನು ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಂಡು ಫಿಜಾ ಖಾನ್ ಅವರ ಮನೆಯ ಕಡೆಗೆ ಹೋಗಿದ್ದರು. ಬಾಲಕನನ್ನು ಕೊಂದು ಜಿಂಕಲವಾಡ ಬಳಿಯ ಕಾಲುವೆಗೆ ಎಸೆದಿದ್ದಾರೆ. ಮೃತ ದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಮತ್ತು ಬಕೆಟ್‌ನಲ್ಲಿ ತುಂಬಿ ನಾಲಾದಲ್ಲಿ ಎಸೆದಿದ್ದಾರೆ.

ಮಗ ಕಾಣೆಯಾದಾಗ ವಾಸಿಂ ಖಾನ್ ರಾತ್ರಿ ಪೊಲೀಸರಿಗೆ ದೂರು ನೀಡಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಗಳನ್ನು ಗುರುತಿಸಿ ಬಂಧಿಸಿದ್ದಾರೆ.

ಐವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಮತ್ತೊಂದೆಡೆ ಮಂಗಳಮುಖಿ ಫಿಜಾ ಬಾಲಕನ ನರಬಲಿ ಮಾಡಿದ್ದಾನೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಅಮಾವಾಸ್ಯೆಯಂದು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದೇವೆಂದು ಪೊಲೀಸರು ಹೇಳಿದ್ದಾರೆ.