stray dog attack  
ನ್ಯೂಸ್

ಬೀದಿ ನಾಯಿ ದಾಳಿಗೆ ವಿಶೇಷ ಚೇತನ ಬಾಲಕ ಸಾವು!

ಮೋಹನ್​ ಶೆಟ್ಟಿ

ಕೇರಳ: ಕೇರಳದ(Kerala) ಕಣ್ಣೂರಿನ ಮುಜಪ್ಪಿಲಂಗಾಡ್​ನಲ್ಲಿ ಬೀದಿ ನಾಯಿಗಳ ದಾಳಿಗೆ 11 ವರ್ಷ ವಯಸ್ಸಿನ ವಿಶೇಷ ಚೇತನ ಬಾಲಕ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ವಿಶೇಷ ಚೇತನ(Specially Abled) ಬಾಲಕನನ್ನು ನಿಹಾಲ್ ಎಂದು ಗುರುತಿಸಲಾಗಿದ್ದು, ಕೆಟ್ಟಿನಕಮ್ ನಿವಾಸಿ ಎಂದು ಹೇಳಲಾಗಿದೆ. ತನ್ನ ಮನೆಯಿಂದ ಸಂಜೆ 5ರ ವೇಳೆಗೆ ನಾಪತ್ತೆಯಾದ ಬಾಲಕ, ರಾತ್ರಿ 8:30ರ ನಂತರ ಮನೆಯ ಹತ್ತಿರ ಪತ್ತೆಯಾಗಿದ್ದಾನೆ.

ಬೀದಿ ನಾಯಿಗಳ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಸ್ಥಳೀಯ ನಿವಾಸಿಗಳು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ,(ಏಜೆನ್ಸೀಸ್).