ಕೃಷಿಕರು, ಕಾರ್ವಿುಕರಿಗೆ ಹೆಗಲು, ದೇಗುಲಗಳಿಗೆ ಸ್ವಾಯತ್ತತೆಯ ನೆರಳು, ಅನ್ನದಾತರ ಆರೋಗ್ಯ ಸೇವೆಗಾಗಿ ಯಶಸ್ವಿನಿ ಮರು ಜಾರಿ, ಕಟ್ಟಡ ಕಾರ್ವಿುಕರಿಗೆ ಹೈಟೆಕ್ ಸಂಚಾರಿ ಕ್ಲಿನಿಕ್ ಜತೆಗೆ ರಿಯಾಯಿತಿ ಬಸ್ ಸವಾರಿ. ನೀರಾವರಿ ಯೋಜನೆಗಳಿಗೆ ಅನುದಾನ ಭರ್ಜರಿ. ಗೋವುಗಳ ದತ್ತು ಸ್ವೀಕಾರಕ್ಕೆ ಪುಣ್ಯಕೋಟಿ, ಹಳ್ಳಿ ರಸ್ತೆ, ಕೆರೆ ಅಭಿವೃದ್ಧಿಗೆ ಕೋಟಿ ಕೋಟಿ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಆನ್ಲೈನ್ ಕೋಚಿಂಗ್, ಧಾರ್ವಿುಕ ಯಾತ್ರೆ ಕೈಗೊಳ್ಳುವವರಿಗೆ ಸಹಾಯಧನ. ಪಡಿತರ ಇನ್ನಷ್ಟು ಉದಾರ. ಸಾಮಾನ್ಯರಿಗಿಲ್ಲ ತೆರಿಗೆ ಬರೆ, ಎಲ್ಲದಕ್ಕೂ ಸಾಲವೇ ಹೊರೆ, ಅಂಗೈನಲ್ಲೇ ಅರಮನೆ ತೋರಿಸದೆ, ಇರುವ ಸಂಪನ್ಮೂಲದಲ್ಲೇ ಸರ್ವರಿಗೂ ಸಮಪಾಲು ನೀಡುವ ದೂರದೃಷ್ಟಿ.. ಹಿತದೃಷ್ಟಿ..
ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚೊಚ್ಚಲ ಬಜೆಟ್ನ ಮುಖ್ಯಾಂಶ. ಈ ಆಯವ್ಯಯ 2023ರ ರಾಜ್ಯ ವಿಧಾನಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಂದ ಮಾತ್ರಕ್ಕೆ ಜನರ ಮುಂದೆ ಭರವಸೆಗಳ ಗೋಪುರವನ್ನೇನು ಅವರು ಕಟ್ಟಿಲ್ಲ. 72 ಸಾವಿರ ಕೋಟಿ ರೂ.ಸಾಲ ಈ ಬಜೆಟ್ನ ಬಂಡವಾಳ. ರಾಜ್ಯದ ಆರ್ಥಿಕ ಸ್ಥಿತಿಗತಿಯ ನೈಜ ಚಿತ್ರಣವನ್ನು ಅರಿತೇ ಬೊಮ್ಮಾಯಿ ರಕ್ಷಣಾತ್ಮಕ ಆಟ ಆಡಿರುವುದು ವಿಶೇಷ.
ಪ್ರಮುಖ ಘೋಷಣೆ
- ಸರ್ವರಿಗೂ ಸೂರು ಯೋಜನೆಯಡಿ 5 ಲಕ್ಷ ಹೊಸ ಮನೆ, ಪಹಣಿ, ಜಾತಿ ಪ್ರಮಾಣಪತ್ರ, ಅಟ್ಲಾಸ್, ಕಂದಾಯ ದಾಖಲೆ ಉಚಿತವಾಗಿ ಮನೆಬಾಗಿಲಿಗೆ
- ನೇಕಾರರ ಸಮ್ಮಾನ್ ಯೋಜನೆಯಡಿ ನೋಂದಾಯಿತ ಕೈಮಗ್ಗ ನೇಕಾರರ ವಾರ್ಷಿಕ ನೆರವು 5 ಸಾವಿರ ರೂ.ಗೆ ಹೆಚ್ಚಳ
ಆನ್ಲೈನ್ ಕೋಚಿಂಗ್: ಕೆಪಿಎಸ್ಸಿ, ಯುಪಿಎಸ್ಸಿ, ಎಸ್ಎಸ್ಸಿ, ಬ್ಯಾಂಕಿಂಗ್, ರೈಲ್ವೆ, ಸಿಡಿಎಸ್, ನೀಟ್, ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್ಲೈನ್ ಕೋಚಿಂಗ್
ಪುಣ್ಯಕೋಟಿ: ಗೋವುಗಳ ದತ್ತು ಸ್ವೀಕಾರಕ್ಕೆ ಪುಣ್ಯಕೋಟಿ ಯೋಜನೆ
ನೀರಾವರಿಗೆ ಭರ್ಜರಿ
- ಎತ್ತಿನಹೊಳೆಗೆ 3 ಸಾವಿರ ಕೋಟಿ ರೂ.
- ಮೇಕೆದಾಟಿಗೆ 1 ಸಾವಿರ ಕೋಟಿ ರೂ.
- ಭದ್ರ ಮೇಲ್ದಂಡೆ 3000 ಕೋಟಿ ರೂ.
- ಕಳಸಾಬಂಡೂರಿ 1000 ಕೋಟಿ ರೂ.
- ಕೃಷ್ಣ ಮೇಲ್ದಂಡೆ 3ನೇ ಹಂತ 5000 ಕೋಟಿ ರೂ.
ಸಿಎಂ ಪಂಚ ಸೂತ್ರ
- ಕೃಷಿ, ಕೈಗಾರಿಕೆ, ಸೇವಾ ವಲಯದಲ್ಲಿ ಹೆಚ್ಚಿನ ಜನರ ಪಾಲುದಾರಿಕೆಯೊಂದಿಗೆ ಅಭಿವೃದ್ಧಿ ಸಾಧನೆ
- ಹೊಸ ಚಿಂತನೆ, ಚೈತನ್ಯ ಹಾಗೂ ಮುನ್ನೋಟದೊಂದಿಗೆ ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ
- ಹಿಂದುಳಿದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ಸಂಘಟಿತ ಅಭಿವೃದ್ಧಿಗೆ ಪ್ರಯತ್ನ
- ಎಲ್ಲರನ್ನೂ ಒಳಗೊಂಡ ಸಮಗ್ರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ
- ದುರ್ಬಲರ ರಕ್ಷಣೆ, ಸ್ವಾಭಿಮಾನದ ಬದುಕು ಕಟ್ಟಿಕೊಡಲು ಕಾರ್ಯಕ್ರಮ
ಮೂರು ಮಂತ್ರ
- ದುರ್ಬಲ ವರ್ಗದವರ ಉನ್ನತಿಗೆ ಶಿಕ್ಷಣ
- ಉದ್ಯೋಗ
- ಸಬಲೀಕರಣ (ಎಜ್ಯುಕೇಷನ್, ಎಂಪ್ಲಾಯ್ಮೆಂಟ್ ಅಂಡ್ ಎಂಪಾವರ್ವೆುಂಟ್-3ಇ)
ಕಾರ್ವಿುಕರಿಗೆ ಹೆಗಲು
- 2.30ಲಕ್ಷ ಕಟ್ಟಡ ಕಾರ್ವಿುಕರ ಶ್ರೇಯೋಭಿವೃದ್ಧಿಗೆ -ಠಿ;2610 ಕೋಟಿ
- ಕಟ್ಟಡ ಕಾರ್ವಿುಕರಿಗಾಗಿ 100 ಹೈಟೆಕ್ ಸಂಚಾರಿ ಕ್ಲಿನಿಕ್, ರಿಯಾಯಿತಿ
- ಬಸ್ ಪಾಸ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ
ವೇತನ ಹೆಚ್ಚಳ
- ಆಶಾ ಕಾರ್ಯಕರ್ತರು, ಗ್ರಾಮ ಸಹಾಯಕರು, ಬಿಸಿಯೂಟ ತಯಾರಕರಿಗೆ 1 ಸಾವಿರ ರೂ. ಸಹಾಯ ಧನ ಏರಿಕೆ
- ಅಂಗನವಾಡಿ ಕಾರ್ಯಕರ್ತೆಯರಿಗೆ -ಠಿ;1000ನಿಂದ -ಠಿ;1500ವರೆಗೆ ಹೆಚ್ಚಳ
- ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ
- ವಿಧವಾ ವೇತನ, ಲೈಂಗಿಕ ಅಲ್ಪಸಂಖ್ಯಾತರ ಮಾಸಿಕ ಪಿಂಚಣಿ ವೇತನ 800 ರೂ.ಗೆ ಹೆಚ್ಚಳ
ಕೃಷಿಕರು ಫುಲ್ ಖುಷ್
- 2022-23ನೇ ಸಾಲಿನಲ್ಲಿ ಕೃಷಿಕ್ಷೇತ್ರಕ್ಕೆ ಸಿಕ್ಕಿದ್ದು 33,700 ಕೋಟಿ ರೂ.
- ರೈತ ಶಕ್ತಿ-ಕೃಷಿ ಯಂತ್ರೋಪಕರಣ ಬಳಕೆ ಉತ್ತೇಜನಕ್ಕಾಗಿ ಎಕರೆಗೆ 250 ರೂ.ನಂತೆ ಡೀಸೆಲ್ ಸಹಾಯಧನ, 500 ಕೋಟಿ ರೂ. ಅನುದಾನ
- ರೈತರಿಗೆ 2 ಸಾವಿರ ಗೋತಳಿಗಳ ವಿತರಣೆ, ಗೋವು ಸಹಕಾರ ಸಂಘ ಸ್ಥಾಪನೆ
ಗ್ರಾಮಗಳ ಕಲ್ಯಾಣ
- ಗ್ರಾಮೀಣ ರಸ್ತೆ ಅಭಿವೃದ್ಧಿಗೆ 1600 ಕೋಟಿ ರೂ.
- ಕೆರೆಗಳ ಅಭಿವೃದ್ಧಿಗೆ 100 ಕೋಟಿ ರೂ.
- ಗ್ರಾಮ ಪಂಚಾಯಿತಿ ಮೂಲಕ ಜನನ, ಮರಣ , ವಿವಾಹ ನೋಂದಣಿ
ದೇಗುಲಗಳಿಗೆ ನೆರವು
- ಮುಜರಾಯಿ ಇಲಾಖೆ ವ್ಯಾಪ್ತಿ ದೇಗುಲಗಳಿಗೆ ಸ್ವಾಯತ್ತತೆ ನೀಡಲು ಕ್ರಮ
- ಧಾರ್ವಿುಕ ದತ್ತಿ ಇಲಾಖೆ ವ್ಯಾಪ್ತಿಯ ದೇಗುಲಗಳ ತಸ್ತಿಕ್ ಮೊತ್ತ 60 ಸಾವಿರ ರೂ.ಗಳಿಗೆ ಹೆಚ್ಚಳ
ಪಡಿತರ ಉದಾರ: ಪಡಿತರದಲ್ಲಿ 5 ಕೆಜಿ ಅಕ್ಕಿ ಜತೆ 1 ಕೆಜಿ ರಾಗಿ ಅಥವಾ ಜೋಳ ವಿತರಣೆ, 4.34 ಕೋಟಿ ಫಲಾನುಭವಿಗಳಿಗೆ ಅನುಕೂಲ