ನ್ಯೂಸ್

ಪುಣೆ ಪೋರ್ಶೆ ಕಾರು ಅಪಘಾತದ ಅಪ್ರಾಪ್ತ ಆರೋಪಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್​

ಪುಣೆ: ಪೋರ್ಶೆ ಕಾರನ್ನು ಚಲಾಯಿಸಿಕೊಂಡು ಹೋಗಿ ಬೈಕ್​ನಲ್ಲಿ ಸಾಗುತ್ತಿದ್ದ ಇಬ್ಬರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳ ಗುದ್ದಿಸಿ ಅವರ ಸಾವಿಗೆ ಕಾರಣನಾದ ಬಾಲಕನನ್ನು ರಿಮಾಂಡ್​ನಿಂದ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್​ ಮಂಗಳವಾರ ಆದೇಶ ನೀಡಿದೆ.

ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ಬಂಧಿಸಿದ್ದು ತಪ್ಪು ಎಂಬುದಾಗಿ ಕೋರ್ಟ್​ ಇದೇ ವೇಳೆ ಅಭಿಪ್ರಾಯಪಟ್ಟಿದೆ. ರಿಮಾಂಡ್ ಆದೇಶವನ್ನು ಕಾನೂನುಬಾಹಿರವೆಂದು ಘೋಷಿಸಿದೆ. ಮೇ 19 ರಂದು, ಪುಣೆಯ ಕಲ್ಯಾಣಿ ನಗರದಲ್ಲಿ ಇಬ್ಬರು ಐಟಿ ವೃತ್ತಿಪರರು ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಪೋರ್ಶೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಕಾರು ಚಲಾಯಿಸುತ್ತಿದ್ದ ಅಪ್ರಾಪ್ತ ಕುಡಿದ ಮತ್ತಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದರು.

ಜುವೆನೈಲ್ ಜಸ್ಟಿಸ್ ಬೋರ್ಡ್ ಸದಸ್ಯರಾದ ಎಲ್.ಎನ್. ದಾನವಾಡೆ ಅವರು ಆರೋಪಿಗೆ ಜಾಮೀನು ನೀಡಿದ್ದು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ರಸ್ತೆ ಸುರಕ್ಷತೆಯ ಬಗ್ಗೆ 300 ಪದಗಳ ಪ್ರಬಂಧವನ್ನು ಬರೆಯುವಂತೆ ಆಗ ಅಪ್ರಾಪ್ತ ಆರೋಪಿಗೆ ಸೂಚಿಸಲಾಗಿತ್ತು.

ಅಪಘಾತದ ಒಂದು ತಿಂಗಳ ನಂತರ, ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜುಷಾ ದೇಶಪಾಂಡೆ ಅವರ ನ್ಯಾಯಪೀಠವು ಬಾಲಾಪರಾಧಿ ನ್ಯಾಯ ಮಂಡಳಿಯ ನಿರ್ಧಾರ ಸರಿಯಲ್ಲ ಎಂದಿದೆ. ಅಪಘಾತವು ದುರದೃಷ್ಟಕರವಾಗಿದ್ದರೂ, ಅಪ್ರಾಪ್ತ ವಯಸ್ಸಿನ ಬಾಲಕನನ್ನು ವೀಕ್ಷಣಾ ಗೃಹದಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಹದಿಹರೆಯದವನನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯವು ಬಾಲಾಪರಾಧಿ ನ್ಯಾಯ ಮಂಡಳಿಗೆ ಆದೇಶಿಸಿದೆ. ಅಪ್ರಾಪ್ತ ಬಾಲಕಿಯ ಪೋಷಕರು ಮತ್ತು ಅಜ್ಜ ಪ್ರಸ್ತುತ ಜೈಲಿನಲ್ಲಿರುವುದರಿಂದ, ಹದಿಹರೆಯದವನ ಕಸ್ಟಡಿಯನ್ನು ಅವನ ತಂದೆಯ ಚಿಕ್ಕಮ್ಮನಿಗೆ ನೀಡಲಾಗಿದೆ.