ನವದೆಹಲಿ: ನೋಯ್ಡಾದ ಡಿಎಲ್‌ಎಫ್ ಮಾಲ್‌ಗೆ ಶನಿವಾರ ಬೆಳಗ್ಗೆ ಬಾಂಬ್ ಇಟ್ಟಿರುವುದಾಗಿ ಅಪರಿಚಿತರಿಂದ ಬೆದರಿಕೆ ಮೇಲ್ ಬಂದಿದ್ದು, ಮಾಹಿತಿ ಪಡೆದ ಪೊಲೀಸ್ ತಂಡ, ಅಗ್ನಿಶಾಮಕ ದಳ ಮತ್ತು ಶ್ವಾನ ದಳ ತಕ್ಷಣ ಸ್ಥಳಕ್ಕೆ ಧಾವಿಸಿ ಮಾಲ್‌ಗಳ ಸಂದರ್ಶಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದರು. ಸಿನಿಮಾ ಪ್ರದರ್ಶನವನ್ನು ಅರ್ಧಕ್ಕೇ ನಿಲ್ಲಿಸಿ ಬಳಿಕ ಪರಿಶೀಲನೆ ನಡೆಸಲಾಯಿತು.
ದೆಹಲಿ-ಎನ್‌ಸಿಆರ್‌ನ ಅನೇಕ ಶಾಪಿಂಗ್ ಮಾಲ್‌ಗಳಿಗೆ ಬಾಂಬ್ ಬೆದರಿಕೆ ಬಂದಿರುವ ಕುರಿತು ನೋಯ್ಡಾ ಪೊಲೀಸರು ವಿವರಣೆ ನೀಡಿದ್ದಾರೆ. ಯಾವುದೇ ಬಾಂಬ್ ಬೆದರಿಕೆ ಬಂದಿಲ್ಲ ಮತ್ತು ಭದ್ರತಾ ಪರಿಶೀಲನೆ ನಡೆಸಲಾಗಿದೆ. ಡಿಎಲ್‌ಎಫ್ ಮಾಲ್‌ನಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ನೋಯ್ಡಾ ಡಿಸಿಪಿ ರಾಮ್ ಬದನ್ ಸಿಂಗ್ ಹೇಳಿದ್ದಾರೆ.
ದೆಹಲಿ-ಎನ್‌ಸಿಆರ್‌ನಲ್ಲಿರುವ ಡಿಎಲ್ಎಲ್ ಮಾಲ್ ಆಫ್ ಇಂಡಿಯಾ ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್, ಮನರಂಜನಾ ವಲಯ, ಆಹಾರ ಮಳಿಗೆ ಮತ್ತು ಇತರ ಅಂಗಡಿಗಳನ್ನು ಹೊಂದಿದೆ.