ನ್ಯೂಸ್

ಅಹಮದಾಬಾದ್​ನಿಂದ ಪಾಟ್ನಾಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ;ಪ್ರಯಾಣಿಕರ ಸ್ಥಳಾಂತರ| indigo-flight

ಆ ಬಳಿಕ ವಿಮಾನವನ್ನು ಸಂಪೂರ್ಣ ಭದ್ರತಾ ಪರಿಶೀಲನೆಗಾಗಿ ನಿಲ್ದಾಣದ ಐಸೊಲೇಷನ್ ಬೇಯಲ್ಲಿ ನಿಲ್ಲಿಸಲಾಗಿದೆ ಮತ್ತು ವಿಮಾನದಲ್ಲಿದ್ದ ಎಲ್ಲಾ 192 ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಪಾಟ್ನಾ; ಇಂದು (4) ಅಹಮದಾಬಾದ್‌ನಿಂದ ಪಾಟ್ನಾಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಮಧ್ಯಾಹ್ನ 1 ಗಂಟೆ ಸುಮಾರಿಗೆ ಪಾಟ್ನಾದ ಜಯಪ್ರಕಾಶ್ ನಾರಾಯಣ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

(ಏಜೆನ್ಸೀಸ್)

ಈ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಆಡಳಿತ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ, ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನದ ಭಾಗವಾಗಿ ವಿಮಾನ ನಿಲ್ದಾಣ, ಭದ್ರತೆ, ಜಿಲ್ಲಾಡಳಿತ ಮತ್ತು ಪೊಲೀಸ್ ಸೇರಿದಂತೆ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವಿಮಾನ ಪಾಟ್ನಾದಲ್ಲಿ ಲ್ಯಾಂಡ್​ ಆದ ಬಳಿಕ ಇಂಡಿಗೋ ನಿಲ್ದಾಣ ವ್ಯವಸ್ಥಾಪಕಿ ಶಾಲಿನಿ ಅವರ ಸೆಲ್‌ಫೋನ್‌ಗೆ ವಾಟ್ಸಾಪ್ ಸಂದೇಶದ ಮೂಲಕ ಬಾಂಬ್ ಬೆದರಿಕೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.