ಮುಂಬೈ: ಹನು ರಾಘವಪುಡಿ ನಿರ್ದೇಶನದ ಸೀತಾ ರಾಮ್ ಸಿನಿಮಾದಲ್ಲಿನ ಸೀತಾ ಮಹಾಲಕ್ಷ್ಮಿ ಪಾತ್ರದಲ್ಲಿ ಅಮೋಘವಾಗಿ ನಟಿಸಿ, ತಮ್ಮ ಸೌಂದರ್ಯದ ಮೂಲಕ ಅಭಿಮಾನಿಗಳ ಮನಗೆದ್ದ ಮರಾಠಿ ಚೆಲುವೆ ಮೃಣಾಲ್ ಠಾಕೂರ್ ಬಗ್ಗೆ ಪರಿಚಯದ ಅಗತ್ಯವಿಲ್ಲ. ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ನಂತರ ಮೃಣಾಲ್ ಠಾಕೂರ್ ರಾತ್ರೋರಾತ್ರಿ ಸ್ಟಾರ್ ಹೀರೋಯಿನ್ ಪಟ್ಟ ಗಿಟ್ಟಿಸಿಕೊಂಡರು. ಅದರ ನಂತರ ಬ್ಯಾಕ್ ಟು ಬ್ಯಾಕ್ ‘ಹಾಯ್ ನನ್ನ’, ‘ಫ್ಯಾಮಿಲಿ ಸ್ಟಾರ್’ ಸಿನಿಮಾಗಳಲ್ಲಿ ಮಿಂಚಿದ್ದು ಗೊತ್ತಿ ಇದೆ. ಪ್ರಭಾಸ್ ಅಭಿನಯದ ಕಲ್ಕಿ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಈ ನಟಿ ಬಾಲಿವುಡ್( Bollywood) ನಟ ರಣಬೀರ್ ಕಪೂರ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇದನ್ನು ಓದಿ: Bollywood | ಪಟೌಡಿ ಅರಮನೆಯನ್ನು ಸೈಫ್ ಅಲಿ ಖಾನ್ ಮ್ಯೂಸಿಯಂ ಮಾಡುವುದು ನಿಜವೇ; ಬಿಟೌನ್ ನಟ ಹೇಳಿದ್ದೇನು?
ಅಬುಧಾಬಿಯಲ್ಲಿ ನಡೆದ ಇಂಟರ್‌ನ್ಯಾಶನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (ಐಐಎಫ್‌ಎ) 2024ರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಮೃಣಾಲ್ ಠಾಕೂರ್, ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಸಿನಿಮಾದಲ್ಲಿನ ರಣಬೀರ್ ಕಪೂರ್ ಪಾತ್ರವನ್ನು ನಟಿ ಸಮರ್ಥಿಸಿಕೊಂಡಿದ್ದಾರೆ. ಅನಿಮಲ್ ಸಿನಿಮಾದಲ್ಲಿನ ರಣಬೀರ್ ಪಾತ್ರವನ್ನು ನೆನೆಪಿಸಿಕೊಳ್ಳುವ ನಾವು ಬರ್ಫಿ ಚಿತ್ರದಲ್ಲಿನ ಅವರ ನಟಿಸಿರುವ ಪಾತ್ರದ ಬಗ್ಗೆ ಮರೆಯಬಾರದು ಎಂದು ಹೇಳಿದರು. ಎರಡು ಸಿನಿಮಾಗಳಲ್ಲಿನ ವಿಭಿನ್ನವಾಗಿದ್ದು, ಉತ್ತಮ ಪ್ರದರ್ಶನ ಕಂಡಿವೆ ಎಂದು ನಾವು ಏಕೆ ಸೆಲೆಬ್ರೆಟ್ ಮಾಡಬಾರದು ಎಂದು ಕೇಳಿದ್ದಾರೆ.
‘ಬರ್ಫಿ’ ಒಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದು, ಇದನ್ನು ಅನುರಾಗ್ ಬಸು ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಣಬೀರ್, ಪ್ರಿಯಾಂಕಾ ಚೋಪ್ರಾ ಮತ್ತು ಇಲಿಯಾನಾ ಡಿಕ್ರೂಜ್, ಸೌರಭ್ ಶುಕ್ಲಾ, ಆಶಿಶ್ ವಿದ್ಯಾರ್ಥಿ, ಜಿಶು ಸೆಂಗುಪ್ತಾ, ರೂಪ ಗಂಗೂಲಿ ಮತ್ತು ಹರದನ್ ಬಂಡೋಪಾಧ್ಯಾಯ ನಟಿಸಿದ್ದಾರೆ. ಇನ್ನು ಅನಿಮಲ್ ಸಿನಿಮಾ ಆ್ಯಕ್ಷನ್ ಡ್ರಾಮಾವಾಗಿದ್ದು ರಣಬೀರ್ ರಣವಿಜಯ್ ಸಿಂಗ್ ಬಲ್ಬೀರ್ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ಟ್ರಿಪ್ಟಿ ಡಿಮ್ರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ಹಿಂದೆ ‘ಅನಿಮಲ್’ ಬಗ್ಗೆ ನಟಿ ಮೃಣಾಲ್ ಠಾಕೂರ್ ಹೇಳಿದ್ದೀಗೆ:
ರಣಬೀರ್ ಪಾತ್ರಕ್ಕಾಗಿ ಸಂಪೂರ್ಣ ಸಿನಿಮಾ ನೋಡಬೇಕು ಎಂದು ನಾನು ಭಾವಿಸುತ್ತೇನೆ. ನಾವು ಚಲನಚಿತ್ರಗಳನ್ನು ಮನರಂಜನೆಗಾಗಿ ಮಾಡಿದ್ದೇವೆ ಎಂಬುದನ್ನು ಮರೆತುಬಿಡುತ್ತೇವೆ. ಆದ್ದರಿಂದ ಅದನ್ನು ಅನಿಮಲ್ ಎಂದು ಕರೆಯುತ್ತಾರೆ ಹೊರತು ದೇವತಾ ಎಂದು ಕರೆಯಲಾಗುವುದಿಲ್ಲ. ಈ ರೀತಿ ಏಕೆ ನಿರ್ಧರಿಸುತ್ತಾರೆ ಎಂದು ನನಗೆ ಗೊತ್ತಿಲ್ಲ. ಇಲ್ಲಿ ವಿಭಿನ್ನ ರೀತಿಯ ಸಿನಿಮಾಗಳು ಬರುತ್ತವೆ. ಎಲ್ಲ ಸಿನಿಮಾಗಳಿಗೆ ಜನರು ಸಮಾಜ ಪ್ರೀತಿ ನೀಡಿ ಬೆಂಬಲಿಸುತ್ತಾರೆ. ನಾನು ಭಾರತೀಯ ಸಿನಿಮಾದ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದರು.
ಮೃಣಾಲ್ ಠಾಕೂರ್ ಅವರು, ವಿಜಯ್ ಕುಮಾರ್ ಅರೋರಾ ನಿರ್ದೇಶನದ ಆಕ್ಷನ್ ಕಾಮಿಡಿ ಸನ್ ಆಫ್ ಸರ್ದಾರ್‌ನ ಸೀಕ್ವೆಲ್‌ನಲ್ಲಿ ಅಜಯ್ ದೇವಗನ್ ಜತೆ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)