ನ್ಯೂಸ್

ಕಡಿಮೆ ಬಡ್ಡಿಗೆ ಕೊಟ್ಯಂತರ ರೂ... ಉದ್ಯಮಿಗೆ ಮೋಸ ಮಾಡಿದ ನಿರ್ಮಾಪಕ

ದೆಹಲಿ: ಉದ್ಯಮಿಗೆ ಲೋನ್ ಮೂಲಕ ಹಣ ಕೊಡಿಸುವುದಾಗಿ ನಂಬಿಸಿ, ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ನಿರ್ಮಾಪಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಬಾಲಿವುಡ್ ನಿರ್ಮಾಪಕ ಅಜಯ್ ಯಾದವ್ ಬಂಧಿತ ಆರೋಪಿ. ಈತ ದೆಹಲಿ ಮೂಲದ ಉದ್ಯಮಿ ರಾಹುಲ್ ನಾಥ್ ಎಂಬಾತನಿಗೆ ಕಡಿಮೆ ಬಡ್ಡಿಯಲ್ಲಿ 65 ಕೋಟಿ ರೂ. ಹಣ ಸಾಲ ಕೊಡಿಸುವುದಾಗಿ ನಂಬಿಸಿದ್ದಾನೆ.

ಇದಕ್ಕೆ ಮುಂಗಡವಾಗಿ 32 ಲಕ್ಷ ರೂ. ಹಣ ಪಡೆದು ವಂಚನೆ ಮಾಡಿದ್ದು, ಈ ಸಂಬಂಧ ಉದ್ಯಮಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು ಆರೋಪಿಯನ್ನು ಇಂದು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಯಾದವ್ 'ಓವರ್ ಟೈಮ್, ಭದಾಸ್, ಲವ್ ಫಿರ್ ಕಭೀ, ರನ್ಭನ್ಕ, ಸಸ್ಪೆನ್ಸ್ ಮತ್ತು ಸಾಕ್ಷಿ ಎಂಬ ಆರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾನೆ.