Bollywood: ಭಾರತೀಯ ಚಲನಚಿತ್ರೋದ್ಯಮದಲ್ಲಿ ಮಲಯಾಳಂ, ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸದಾ ಮುಂದಿವೆ. ಆದರೆ, ಈ ವರ್ಷ ನಿರೀಕ್ಷಿಸಿದಂತೆ ಯಾವ ಚಿತ್ರಗಳು ಬಾಲಿವುಡ್ ಅಂಗಳದಿಂದ ಅಷ್ಟಾಗಿ ಸದ್ದು ಮಾಡಿಲ್ಲ. ಅದು ಗಳಿಕೆಯೇ ಆಗಿರಬಹುದು ಅಥವಾ ಉತ್ತಮ ವಿಮರ್ಶೆಯೇ ಆಗಿರಬಹುದು. ಎರಡು ವಿಚಾರಗಳಲ್ಲಿಯೂ ಬಾಲಿವುಡ್ ಮುಗ್ಗರಿಸಿದೆ.
ಇದನ್ನೂ ಓದಿ: 10-15 ವರ್ಷಗಳ ಹಳೆಯ ಕಾರುಗಳಿಗೆ ಬ್ರೇಕ್! 100 ವರ್ಷ ದಾಟಿದ ವಿಂಟೇಜ್ ಕಾರು ಓಕೆ? ಏನಿದು ನಿಯಮ? | Vintage Vehicles
ಈಗಾಗಲೇ ವರ್ಷದ ಮೊದಲಾರ್ಧ ಮುಗಿದು ದ್ವಿತೀಯಾರ್ಧ ಶುರುವಾಗಿದೆ. ಮಾಲಿವುಡ್, ಟಾಲಿವುಡ್ ಮತ್ತು ಕಾಲಿವುಡ್ ಚಿತ್ರಗಳು ಬ್ಯಾಕ್ ಟು ಬ್ಯಾಕ್ ಚಿತ್ರಮಂದಿರಗಳಿಗೆ ಲಗ್ಗೆಯಿಡುತ್ತಿವೆ. ಈ ಸಾಲಿನಲ್ಲಿ ಹಲವಾರು ಸಿನಿಮಾಗಳು ಚಿತ್ರಮಂದಿರ ಮತ್ತು ಒಟಿಟಿ ಎರಡರಲ್ಲೂ ಸಿನಿಪ್ರಿಯರ ಗಮನ ಸೆಳೆದಿವೆ. ಸಾಕಷ್ಟು ಮಲಯಾಳಂ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಬಾಲಿವುಡ್ನಿಂದ ಹೊರಬಂದ ಬ್ಲಾಕ್ಬಸ್ಟರ್ ಸಿನಿಮಾಗಳು ಕೇವಲ ಬೆರಳೆಣಿಕೆಯಷ್ಟು.
ಇತ್ತೀಚೆಗಷ್ಟೇ ಆಮಿರ್ ಖಾನ್ ಅಭಿನಯದ 'ಸೀತಾರೆ ಜಮೀನ್ ಪರ್' ಉತ್ತಮ ಗಳಿಕೆ ಕಾಣುತ್ತಿದ್ದು, ಪ್ರಸ್ತುತ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನದ ಜೊತೆಗೆ 165 ಕೋಟಿ ರೂ. ಲಾಭದತ್ತ ಮುಖಮಾಡಿದೆ. ಇದು ಚಿತ್ರತಂಡಕ್ಕೆ ಸಂತಸ ತಂದಿದೆ. ಈ ಮುನ್ನ ಅಜಯ್ ದೇವಗನ್ ನಟಿಸಿದ 'ರೈಡ್ 2' ಬಾಕ್ಸ್ ಆಫೀಸ್‌ನಲ್ಲಿ 165 ಕೋಟಿ ರೂ. ಗಳಿಸಿ ಲಾಭ ಕಂಡಿತು. ಇದನ್ನೂ ಮೀರಿಸಿ ಸದ್ದು ಮಾಡಿದ್ದು, ವಿಕ್ಕಿ ಕೌಶಲ್ ಅಭಿನಯದ 'ಛಾವಾ'. ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 604 ಕೋಟಿ ರೂ. ಕಲೆಕ್ಷನ್ ಕಂಡ ಈ ಸಿನಿಮಾ, ಈ ವರ್ಷದ ಅತಿ ಹೆಚ್ಚು ಗಳಿಕೆ ಕಂಡ ಹಿಂದಿ ಚಿತ್ರವಾಗಿದೆ.
ಇನ್ನು ಅಕ್ಷಯ್ ಕುಮಾರ್ ನಟಿಸಿದ 'ಹೌಸ್‌ಫುಲ್ 5', 'ದಿ ಡಿಪ್ಲೊಮ್ಯಾಟ್', 'ಮಾ,' 'ಕ್ರೇಕ್ಸಿ' ಮತ್ತು ಇನ್ನೂ ಹಲವು ಉತ್ತಮ ಚಿತ್ರಗಳು ಭರ್ಜರಿ ಓಪನಿಂಗ್ ಪಡೆದಿದ್ದೇ ಆದರೂ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಮುಖಭಂಗ ಅನುಭವಿಸಿ, ಸೋಲಿನ ಹಾದಿ ಹಿಡಿದಿವೆ. 2025ರ ಮೊದಲಾರ್ಧದಲ್ಲಿ ಸೋಲಿನ ಕಹಿ ಉಂಡಿರುವ ಬಾಲಿವುಡ್, ದ್ವಿತೀಯಾರ್ಧದಲ್ಲಿ ಹಲವಾರು ಬಹುನಿರೀಕ್ಷಿತ ಚಿತ್ರಗಳ ಮೂಲಕ ಬಾಕ್ಸ್ ಆಫೀಸ್ ಧೂಳಿಪಟ ಮಾಡಲು ಎದುರುನೋಡುತ್ತಿದೆ,(ಏಜೆನ್ಸೀಸ್).