ನ್ಯೂಸ್

ಬರೋಬ್ಬರಿ 10 ಕೋಟಿ ರೂ. ಮೌಲ್ಯದ ಶೂ ಕಲೆಕ್ಷನ್ ಇಟ್ಟಿರುವ ಖ್ಯಾತ ನಟಿ; 123 ಕೋಟಿ ರೂ. ಆಸ್ತಿ ಒಡತಿ

ಮುಂಬೈ: ಬಾಲಿವುಡ್‌  ನಟಿ ಶ್ರದ್ಧಾ ಕಪೂರ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.   ನಟಿ ಬಳಿ ಇರುವ ಆಸ್ತಿಯ ಕುರಿತಾಗಿ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಶ್ರದ್ಧಾ ಕಪೂರ್ ಅವರ ಆಸ್ತಿ 123 ಕೋಟಿ ರೂಪಾಯಿ ಇದೆ. ಅವರು ಪ್ರತಿ ಚಿತ್ರಕ್ಕೆ 3-5 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಅವರು ಪ್ರತಿ ವರ್ಷ 8 ಕೋಟಿ ರೂಪಾಯಿ ದುಡಿಯುತ್ತಾರೆ. ಪ್ರತಿ ತಿಂಗಳು ಸರಾಸರಿ 1 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ವೀಟ್, ಲಿಪ್ಟನ್, ದಿ ಬಾಡಿ ಶಾಪ್ ಸೇರಿ ಹಲವು ಬ್ರ್ಯಾಂಡ್ಗಳಿಗೆ ಅವರು ರಾಯಭಾರಿ ಆಗಿದ್ದಾರೆ.

ಶ್ರದ್ಧಾ ಬಳಿ ಆಡಿ ಕ್ಯೂ7, ಮರ್ಸೀಡಿಸ್ ಬೆಂಜ್ ಜಿಎಲ್ಇ, ಬಿಎಂಡಬ್ಲ್ಯೂ 7 ಸೀರಿಸ್ ಕಾರು ಇದೆ. ಇತ್ತೀಚೆಗೆ ಅವರು ಲ್ಯಾಂಬೋರ್ಗಿನಿ ಕಾರು ಖರೀದಿ ಮಾಡಿದ್ದರು. ಅವರು ಜುಹುದಲ್ಲಿ ಮನೆ ಹೊಂದಿದ್ದಾರೆ. ಇದು ಅವರು ಫ್ಯಾಮಿಲಿ 1987ರಲ್ಲಿ ಖರೀದಿಸಿದ ಮನೆ. ಇದರ ಬೆಲೆ 60 ಕೋಟಿ ರೂಪಾಯಿ. ಇದು ಸಮುದ್ರ ಕಡೆ ಮನೆ ಮಾಡಿದೆ. ಮಡ್ ಐಸ್ಲ್ಯಾಂಡ್ನಲ್ಲಿ 20 ಕೋಟಿ ಬೆಲೆ ಬಾಳುವ ಬಂಗಲೆ ಹೊಂದಿದ್ದಾರೆ. ಇನ್ನೂ ಅನೇಕ ಕಡೆಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ.

ಶ್ರದ್ಧಾ ಕಪೂರ್ ಅವರು ಟ್ರಿಪ್ ಮಾಡೋಕೆ, ಶ್ಯೂ ಖರೀದಿ ಮಾಡೋಕೆ, ಬ್ಯಾಗ್ ಖರೀದಿ ಮಾಡಲು ಹೆಚ್ಚು ಹಣ ವ್ಯಯಿಸುತತ್ತಾರೆ. ಅವರ ಬಳಿ 10 ಕೋಟಿ ರೂಪಾಯಿ ಬೆಲೆ ಬಾಳುವ ಶ್ಯೂಗಳೇ ಇದೆ. ಅವರ ಬಳಿ ಹಲವು ಕಂಪನಿಯ ಹ್ಯಾಂಡ್ ಬ್ಯಾಗ್ ಇದು ಇದರ ಬೆಲೆ ಕೂಡ ಕೋಟಿ ಮೀರುತ್ತದೆ.

ಶ್ರದ್ಧಾ ಅವರು ಆ್ಯಕ್ಟಿಂಗ್ನಲ್ಲಿ ಮೂಲಕ ಗಮನ ಸೆಳೆದಿದ್ದಾರೆ. 2019ರ ಫೋರ್ಬ್ಸ್ ಟಾಪ್ 100 ಸೆಲೆಬ್ರಿಟಿ ಲಿಸ್ಟ್ನಲ್ಲಿ ಅವರು ಹೆಸರು ಕೂಡ ಇತ್ತು. ಅವರಿಗೆ 26ನೇ ಸ್ಥಾನ ಸಿಕ್ಕಿತ್ತು.