ಮೋನಾ ಸಿಂಗ್ 
ನ್ಯೂಸ್

Mona Singh - ಕೇವಲ 6 ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡ 44 ವರ್ಷದ ನಟಿ

Mona Singh -
ಎರಡು ದಶಕ ಮೀರಿದ ಸಿನಿಕರಿಯರ್​ನಲ್ಲಿ "ಜೆಸ್ಸಿ ಜೈಸಿ ಕೋಯೀ ನಹೀ' ಧಾರಾವಾಹಿ ಸೇರಿ 20ಕ್ಕೂ ಅಧಿಕ ಸೀರಿಯಲ್​ ಮತ್ತು ರಿಯಾಲಿಟಿ ಶೋಗಳಲ್ಲಿ, "3 ಈಡಿಯಟ್ಸ್​', "ಲಾಲ್​ ಸಿಂಗ್​ ಛಡ್ಡಾ', "ಬಾರ್ಡರ್​ 2' ಸೇರಿ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ, ಜತೆಗೆ "ಕೊಹ್ರಾ' ಸೇರಿ ಡಜನ್​ಗೂ ಹೆಚ್ಚು ವೆಬ್​ಸರಣಿಗಳಲ್ಲಿ ನಟಿಸಿರುವ ಹೆಗ್ಗಳಿಕೆ ನಟಿ ಮೋನಾ ಸಿಂಗ್​ಗೆ ಸಲ್ಲುತ್ತದೆ. ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದರೂ, ಇತ್ತೀಚಿನ ದಿನಗಳಲ್ಲಿ ಅವರು ಕಂಟೆಂಟ್​ ಪ್ರಧಾನ ಸಿನಿಮಾ, ಸರಣಿಗಳಲ್ಲಿ ಮುಖ್ಯ ಭೂಮಿಕೆಯಲ್ಲೂ ಮಿಂಚುತ್ತಿದ್ದಾರೆ. ಇದೀಗ "ಪಾನ್​ ಪರ್ದಾ ಜರ್ದಾ' ಸರಣಿಯಲ್ಲಿ ಬೋಲ್ಡ್​ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ 44 ವರ್ಷದ ಮೋನಾ ಕೇವಲ ಆರು ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡು ಮತ್ತಷ್ಟು ಫಿಟ್​ ಆಗಿದ್ದಾರೆ. ತಮ್ಮ ಫಿಟ್ನೆಸ್​ ಪಯಣದ ಬಗ್ಗೆ, "ನನಗೆ ಮೊದಲಿನಿಂದಲೂ ಹೀಗೆ ಕಾಣಿಸಿಕೊಳ್ಳಬೇಕು ಎಂಬ ಆಸೆ ಇತ್ತು. ಆದರೆ, ಸೋಮಾರಿಯಾಗಿದ್ದ ಕಾರಣ ಆಗ ವರ್ಕೌಟ್​ ಶುರು ಮಾಡುವೆ, ಈಗ ಡಯಟ್​ ಪ್ರಾರಂಭಿಸುವೆ ಅಂತ ಮುಂದೂಡುತ್ತಾ ಬರುತ್ತಿದ್ದೆ. ಆದರೆ, ನನಗೆ ಈ ಪಾತ್ರಕ್ಕೆ ಹೀಗೇ ಕಾಣಿಸಿಕೊಳ್ಳಬೇಕು ಅಂದರು. ಪಾತ್ರ ಚೆನ್ನಾಗಿದ್ದ ಕಾರಣ ನನಗೂ ವರ್ಕೌಟ್​ ಮಾಡಲು ಸ್ಫೂರ್ತಿ ದೊರೆಯಿತು. ಈಗ ಮೊದಲೇ ತೂಕ ಇಳಿಸಿಕೊಂಡರೆ ಚೆನ್ನಾಗಿರುತ್ತಿತ್ತು ಅಂತನ್ನಿಸುತ್ತಿದೆ' ಎಂದು ನಗುತ್ತಾರೆ ಮೋನಾ ಸಿಂಗ್​. ಸದ್ಯ, "ಪಾನ್​ ಪರ್ದಾ ಜರ್ದಾ' ಪೋಸ್ಟ್​-ಪ್ರೊಡಕ್ಷನ್​ ಹಂತದಲ್ಲಿದ್ದು, ಕೆಲವೇ ತಿಂಗಳಲ್ಲಿ ಒಟಿಟಿಯಲ್ಲಿ ರಿಲೀಸ್​ ಆಗಲಿದೆ.