ನ್ಯೂಸ್

ದೀಪಿಕಾ ಮುಖಸ್ತುತಿ: ಜಗತ್ತಿನ 10 ಸುಂದರಿಯರ ಪಟ್ಟಿಯಲ್ಲಿ ಬಾಲಿವುಡ್ ನಟಿ

ಕೇವಲ ಮೈ ಬಣ್ಣದ ಮೂಲಕವಷ್ಟೇ ಮಹಿಳೆಯರ ಸೌಂದರ್ಯವನ್ನು ಅಳೆಯಲು ಸಾಧ್ಯವಿಲ್ಲ. ಈಗೀಗ ಈ ಮನೋಭಾವ ಬದಲಾಗುತ್ತಿದೆ. ದೇಹ ಭಾಷೆ, ಮಾತು, ನಡಿಗೆ ಹೀಗೆ ನಾನಾ ವಿಚಾರಗಳಿಂದ ಸೌಂದರ್ಯವನ್ನು ಅಳೆಯಲಾಗುತ್ತದೆ. ಇದೀಗ, ಲಂಡನ್ ೇಶಿಯಲ್ ಪ್ಲಾಸ್ಟಿಕ್ ಸರ್ಜರಿ ಸಂಸ್ಥೆಯು ಮುಖದ ಅಳತೆ, ಅಚ್ಚುಕಟ್ಟು, ಆಕರ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಸುಂದರ ಮಹಿಳೆಯನ್ನು ಗುರುತಿಸಿದೆ. ಈ ಪಟ್ಟಿಯ 10 ಸುಂದರಿಯರಲ್ಲಿ ಭಾರತದಿಂದ ನಟಿ ದೀಪಿಕಾ ಪಡುಕೋಣೆ ಮಾತ್ರ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯನ್ನು ತಯಾರಿಸಲು ಸಂಸ್ಥೆಯು ಪುರಾತನ ಗ್ರೀಕ್ ಮಾದರಿಯ ಗೋಲ್ಡನ್ ರೇಶಿಯೋ ನಿಯಮವನ್ನು ಮಾನದಂಡವಾಗಿಸಿಕೊಂಡಿದೆ. ಮಹಿಳೆಯರ ಮುಖದ ಉದ್ದ, ಅಗಲ ಜತೆಗೆ ಹಣೆ, ಮೂಗು, ತುಟಿ, ಕಣ್ಣು, ಉಬ್ಬುಗಳ ಅಚ್ಚುಕಟ್ಟು, ಆಕರ್ಷಣೆಯನ್ನು ಆಧರಿಸಿ ಅಳತೆ ಮಾಡಲಾಗುತ್ತದೆ. ಈ ಪಟ್ಟಿಯಲ್ಲಿ ಬ್ರಿಟಿಷ್ ನಟಿ ಜೋಡಿ ಕೋಮರ್ ಮೊದಲ ಸ್ಥಾನ ಪಡೆದಿದ್ದಾರೆ. ಶೇಕಡಾ 94.52ರಷ್ಟು ಅವರ ಮುಖದ ಎಲ್ಲ ಅಂಗಗಳು ಅಚ್ಚುಕಟ್ಟಿನಿಂದ ಕೂಡಿವೆ. ಪಾಪ್‌ತಾರೆ, ಹಾಲಿವುಡ್ ನಟಿ ಜೆಂಡಾಯಾ (ಶೇ.94.37) ದ್ವಿತೀಯ, ಬೆಲ್ಲಾ ಹಡೀಡ್ (ಶೇ.94.35) ಮೂರನೇ ಸ್ಥಾನ ಪಡೆದಿದ್ದು, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದಿದ್ದಾರೆ. ದೀಪಿಕಾ ಮುಖ ಶೇ. 91.22ರಷ್ಟು ಅಚ್ಚುಕಟ್ಟಾಗಿದೆ ಎಂದು ಸಂಸ್ಥೆ ತಿಳಿಸಿದೆ. ಈ ಮೂಲಕ ದೀಪಿಕಾ ಮುಡಿಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಬಿಯಾನ್ಸಿ, ಆರಿಯಾನಾ ಗ್ರಾಂಡೆ, ಟೇಲರ್ ಸ್ವ್‌ಟಿ ಹಾಗೂ ಕಿಮ್ ಕರ್ದಾಶಿಯಾನ್ ಕೂಡ ಈ ಪಟ್ಟಿಯಲ್ಲಿದ್ದಾರೆ. -ಏಜೆನ್ಸೀಸ್