ನ್ಯೂಸ್

Bollywood Actor: 'ಜೀವಂತವಾಗಿ ಇರಬೇಕಂದ್ರೆ 5ಕೋಟಿ ಕೊಡು': ಸಲ್ಮಾನ್​ ಖಾನ್​ಗೆ ಮತ್ತೆ ಬೆದರಿಕೆ

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್(Bollywood Actor) ಸಲ್ಮಾನ್ ಖಾನ್‌ಗೆ ಮತ್ತೆ ಕೊಲೆ ಬೆದರಿಕೆ ಬಂದಿದೆ. 5 ಕೋಟಿ ರೂ. ನೀಡಬೇಕು, ಇಲ್ಲದಿದ್ದರೆ ನಿನ್ನ ಪರಿಸ್ಥಿತಿ ಬಾಬಾ ಸಿದ್ಧಿಕಿಗಿಂತ ಭೀಕರವಾಗಿರುತ್ತದೆ ಎಂದು ಎಚ್ಚರಿಸಲಾಗಿದೆ.

ಮುಂಬೈ ಟ್ರಾಫಿಕ್ ಪೊಲೀಸ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಖಾನ್ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರೊಂದಿಗಿನ ದೀರ್ಘಕಾಲದ ದ್ವೇಷವನ್ನು ಪರಿಹರಿಸಲು ಬಯಸಿದರೆ, ಈ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ ಯಾರೋ ಸಂದೇಶ ಕಳೂಹಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಮ್ಮ ಎಚ್ಚರಿಕೆ ಪಾಲಿಸುವಲ್ಲಿ ವಿಫಲವಾದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ. ಅ.12 ರಂದು ಗುಂಡಿಕ್ಕಿ ಕೊಲ್ಲಲ್ಪಟ್ಟ ಬಾಬಾ ಸಿದ್ದಿಕಿಗಿಂತ ಸಲ್ಮಾನ್​ ಸಾವು ಕೆಟ್ಟದಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಎಚ್ಚರಿಕೆ ಸಂದೇಶ ಕಳುಹಿಸುವವರ ಗುರುತು ಮತ್ತು ಉದ್ದೇಶಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಇನ್ನು ಬೆದರಿಕೆ ನಂತರ ಸಲ್ಮಾನ್​ ಖಾನ್​ ಅವರ ಬಾಂದ್ರಾ ಮನೆಯ ಹೊರಗೆ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಮನೆಯ ಹೊರಗೆ ಶಸ್ತ್ರಸಜ್ಜಿತ ಪೊಲೀಸರು, ಮತ್ತು ಮೀಸಲು ಪೊಲೀಸರನ್ನು ನಿಯೋಜಿಸಲಾಗಿದೆ.

2024ರ ಏಪ್ರಿಲ್‌ನಲ್ಲಿ ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡು ಹಾರಿಸಲಾಗಿತ್ತು. ಆಗ ಇದು ಅಂತಿಮ ಎಚ್ಚರಿಕೆ ಎಂದು ತಿಳಿಸಲಾಗಿತ್ತು.