ಬಿಹಾರ: ಮಕ್ಕಳ್ಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ದೋಣಿ ಮುಳುಗಡೆಯಾದ ಘಟನೆ ಮುಜಾಫರ್ಪುರ್ನಲ್ಲಿ ನಡೆದಿದೆ. ಮುಂಜಾನೆ 10.30 -11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, 34 ಮಕ್ಕಳು ದೊಣಿಯಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಭಾಗಮತಿ ನದಿಯಲ್ಲಿ ನಡೆದ ಈ ದುರಂತದಲ್ಲಿ ಸುಮಾರು 12 ಮಕ್ಕಳು ನಾಪತ್ತೆಯಾಗಿದ್ದು, ಪ್ರಾಣ ಹಾನಿಯಾಗಿರಬಹುದೆಂದು ಹೆತ್ತವರು ಆತಂಕಗೊಂಡಿದ್ದಾರೆ. ಸದ್ಯ ಪೊಲೀಸರು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದೊಂದಿಗೆ ದೌಡಾಯಿಸಿ ಹುಡುಕಾಟ ನಡೆಸುತ್ತಿದ್ದಾರೆ.
ಘಟನಾ ಸಂಬಂಧ ಬಿಹಾರದ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಪ್ರತಿಕ್ರಿಯಿಸಿ, " ಈಗಾಗಲೇ ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ. ಅಪಘಾತದಲ್ಲಿ ಹಾನಿಗೊಳಗಾದ ಮಕ್ಕಳ ಕುಟುಂಬದವರಿಗೆ ಸರ್ಕಾರ ಸಹಾಯ ಮಾಡಲಿದೆ" ಎಂದು ಆಶ್ವಾಸನೆ ನೀಡಿದ್ದಾರೆ.
ಮಕ್ಕಳೊಂದಿಗೆ ದೊಡ್ಡವರೂ ದೋಣಿಯಲ್ಲಿದ್ದರು. ಸಾಮರ್ಥ್ಯಕ್ಕೂ ಮೀರಿ ಜನರನ್ನು ದೋಣಿಯಲ್ಲಿ ತುಂಬಿಸಿದ್ದರಿಂದ ಅಪಘಾತ ಸಂಭವಿಸದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.